ನವಂಬರ್‌ನಲ್ಲೇ `ನ್ಯೂರಾನ್` ಬಿಡುಗಡೆ
Posted date: 04 Mon, Nov 2019 – 09:04:44 AM

ಫ಼್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.ವಿ.ಆರ್ ಅವರು ನಿರ್ಮಿಸಿರುವ ‘ನ್ಯೂರಾನ್‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನವಂಬರ್‌ನಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನೈಜ ಘಟನೆ ಆಧಾರಿತ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಕಾಸ್ ಪುಷ್ಪಗಿರಿ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.

ಯುವ ಈ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್(ಬಾಂಬೆ), ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಹೈದರಾಬಾದ್‌ನ ಶೋಯಬ್ ಅಹಮದ್ ಛಾಯಾಗ್ರಹಣ, ಶ್ರೀಧರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಡಾ|| ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed