ಬಾಲಾಜಿ ಸ್ಟುಡಿಯೋದಲ್ಲಿ ನಂಜುಂಡನಿಗೆ ಡಿ.ಟಿ.ಎಸ್.:-
Posted date: 2/June/2010

ಅಮಿತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಷ್ ಕೂರ್ಗ್ ಹಾಗೂ ವಿ.ಕೆ. ಜಿಂದಾಲ್ ನಿರ್ಮಿಸುತ್ತಿರುವ ನಂಜನಗೂಡು ನಂಜುಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯ ಇದೀಗ ಅಂತಿಮ ಹಂತ ತಲುಪಿದೆ. ಕಳೆದ ಶುಕ್ರವಾರದಿಂದ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ನಂಜುಂಡನಿಗೆ ಡಿ.ಟಿ.ಎಸ್. ಅಳವಡಿಸುವ ಕಾರ್ಯ ಪ್ರಾರಂಭವಾಗಿದ್ದು, ಸುಮಾರು ೧೫ ದಿನಗಳ ಕಾಲ ನಡೆಯಲಿದೆ. ಪಯಣದಲ್ಲಿ ಮುಗ್ಧ ಅಭಿನಯದಿಂದ ಪ್ರೇಕ್ಷಕರನ್ನು ಸೂರೆಗೊಂಡಿದ್ದ ರವಿಶಂಕರ್ ಇಲ್ಲಿ ನಂಜುಂಡನಾಗಿದ್ದಾರೆ. ಪ್ರಚಂಡರಾವಣದಂಥ ಪೌರಾಣಿಕ ಕಥೆಯನ್ನು ಚಿತ್ರರೂಪಕ್ಕೆ ತಂದಂತಹ ಶ್ರೀನಿವಾಸಪ್ರಸಾದ್ ಈ ಚಿತ್ರದ ನಿರ್ದೇಶಕರು. ಮಲಯಾಳಂ ಚಿತ್ರವೊಂದರ ಕನ್ನಡ ಅವತರಣಿಕೆಯಾದ ಈ ಚಿತ್ರ ಮಾನಸಿಕ ದೌರ್ಬಲ್ಯವುಳ್ಳ ವ್ಯಕ್ತಿಯೊಬ್ಬನ ಕಥೆಯಾಗಿದ್ದು, ಮಲಯಾಳಂ ಬೆಡಗಿ ಹಂಸಿಣಿ ನಂಜುಂಡನ ಹೆಂಡತಿ ಪಾತ್ರ ನಿರ್ವಹಿಸಿದ್ದಾಳೆ. ಆಕೆ ಸುಂದರಿಯಾಗಿರುವುದೇ ನಾಯಕನಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಸೈಕಾಲಜಿ ಹಾಗೂ ಹಾಸ್ಯ ಚಿತ್ರದ ಪ್ರಮುಖ ಅಂಶಗಳಾಗಿದ್ದು, Zತ್ರದ ಐದು ಹಾಡುಗಳಿಗೆ ಕೆ.ವಿ. ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್. ಗಿರಿ ಸಹಾಯಕರಾಗಿದ್ದ ಸುರೇಶ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಇದ್ದು, ಮೈಸೂರು, ಶ್ರಿರಂಗಪಟ್ಟಣ, ನಂಜನಗೂಡು, ಪಾಂಡವಪುರ, ಮಡಿಕೇರಿ ಹಾಗೂ ಕೆ.ಆರ್.ಎಸ್.ಗಳಲ್ಲಿ ಶೂಟಿಂಗ್ ನಡೆದಿದೆ. ನಾಗರಾಜ ಕೋಟೆ, ಕೆ.ಎಸ್.ಎಲ್. ಸ್ವಾಮಿ, ಜೈಜಗದೀಶ್ ಪ್ರಮುಖ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed