ಬಿ.ಎನ್.ಗಂಗಾಧರ್ ನಿರ್ಮಾಣದ ನೂತನ ಚಿತ್ರಕ್ಕೆ ಹಾಡಿನ ಚಿತ್ರೀಕರಣ
Posted date: 11 Tue, Sep 2018 – 08:30:38 AM

 ಎ.ಎನ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎನ್.ಗಂಗಾಧರ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರಕಾಗಿ ಮೋಹನ್ ಅವರು ಬರೆದಿರುವ ‘ಖಾಲಿ ಹಾರ್ಟಲ್ಲಿ ಟ್ಯೂಬ್‌ಲೈಟು. ಹೊಡ್ಕೊಂತೈತೆ ಡೇ ಅಂಡ್ ನೈಟು‘ ಎಂಬ ಹಾಡಿನ ಚಿತ್ರೀಕರಣ ವಿಲ್ಸನ್ ಗಾರ್ಡನ್ ಬಳಿಯ ಅರುಣ್ ಸಿನಿ ಸರ್ವಿಸಸ್‌ನಲ್ಲಿ ನಿರ್ಮಿಸಲಾಗಿದ್ದ ಸೆಟ್‌ನಲ್ಲಿ ನಡೆದಿದೆ. ಚೇತನ್, ಅರ್ಜುನ್ ಆರ್ಯ, ಮನು, ಕೆಂಪೇಗೌಡ, ಕಾವ್ಯ, ಕುಸುಮ, ಸಾಕ್ಷಿ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸಿದ ಈ ಹಾಡಿಗೆ ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಈವರೆಗೂ ೨೩ದಿನಗಳ ಚಿತ್ರೀಕರಣವಾಗಿದೆ.

ಎಸ್.ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದಿನೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿದೆ. ಪ್ರಸಾದ್ ಬಾಬು ಛಾಯಾಗ್ರಹಣ, ಶಿವು ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚೇತನ್, ಅರ್ಜುನ್ ಆರ್ಯ, ಮನೋಜ್, ಕೆಂಪೇಗೌಡ, ಶ್ರಾವ್ಯ, ಸುಷ್ಮ, ಸಾಕ್ಷಿ, ಎಂ.ಎಸ್.ಉಮೇಶ್, ಟೆನ್ನಿಸ್ ಕೃಷ್ಣ, ಭಾರತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed