ರೋಚಕತೆಯ ಸುತ್ತ ನಡೆಯುವ ಕಥನ ಆಟಕ್ಕುಂಟು ಲೆಕ್ಕಕ್ಕಿಲ್ಲ -3/5 ***
Posted date: 29 Sun, Sep 2019 – 12:44:03 PM

ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿ  ವರ್ತನೆ ಮೀರಿದಾಗ ಅದುಎಂತಹ ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯುಕುರಿತು ಹೇಳುವುದಾದರೆ ಹುಬ್ಬಳ್ಳಿಯಿಂದ ಸಿಟಿಗೆ ಬರುವ  ಇಂಜಿನಿಯರ್ ಬ್ರೋಕರ್ ಮೂಲಕ ಬಾಡಿಗೆ ಮನೆಗೆ ಹೋಗುತ್ತಾನೆ. ಹೊಸ ಮನೆಗೆ ಬಂದ ಕೆಲವೇ ದಿನಗಳಲ್ಲಿ ಪತ್ನಿಗೆ ಬೇರೆತರಹದ ವಿಚಿತ್ರವಾಧ ಶಬ್ದಗಳು ಕೇಳಲಾರಂಭಿಸುತ್ತದೆ.ಇದನ್ನುಗಂಡನ ಬಳಿ ಹೇಳಿದರೂ ಅವನು ನಂಬುವುದಿಲ್ಲ. ಮುಂದೆ ಅವನಿಗೂ ಅದೇ ಅನುಭವ ಆದಾಗ ಮೆಂಟಲ್‌ಡಾಕ್ಟರ್‌ನ್ನು ಭೇಟಿ ಮಾಡಿ ಸಲಹೆ ಪಡೆಯುತ್ತಾನೆ. ಇದರ ಮದ್ಯೆ ಪತ್ನಿ ಮನೆಯನ್ನು ಶುದ್ದ ಮಾಡುವಾಗ ಹಳೇ ಟೇಪ್‌ರಿಕಾರ್ಡರ್ ಸಿಗುತ್ತದೆ.ಅದರಜೊತೆಗೆ ಒಂದು ಕ್ಯಾಸೆಟ್ ಆಕೆ ನೋಡುತ್ತಾಳೆ. ಅದನ್ನು ಹಾಕಿದಾಗ ಅದರಲ್ಲಿರುವ ಮಹಿಳೆ ಧ್ವನಿ ಕೇಳಿಸುತ್ತದೆ.ಅಲ್ಲಿಂದಕತೆ ಮತ್ತೋಂದು ಹಂತಕ್ಕ ತೆಗೆದುಕೊಂಡು ಹೋಗುತ್ತದೆ, ಮುಂದೇನು ಎಂಬುದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿಯಬಹುದು.

ಇಡೀ ಸಿನಿಮಾವು ನಾಲ್ಕು ಪಾತ್ರಗಳ ಸುತ್ತಗಿರಕಿ ಹೊಡೆಯುತ್ತದೆ.ಸಂಚಾರಿ ವಿಜಯ್‌ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಂಡು  ಗಮನ ಸೆಳೆಯುತ್ತಾರೆ. ಚಿಕ್ಕ ವಯಸ್ಸಿನಲ್ಲೆ ಮಗುವಿನ ತಾಯಿಯಾಗಿರುವ ಮಯೂರಿ ಅನುಕಂಪ ಗಿಟ್ಟಿಸುತ್ತಾರೆ. ಪೋಲೀಸ್‌ ಇನ್ಸ್‌ಪೆಕ್ಟರ್  ಆಗಿ ಶೋಭರಾಜ್, ವೈದ್ಯರಾಗಿ ಅಚ್ಯುತಕುಮಾರ್ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾನಸಿಕ ಖಿನ್ನತೆ ಅಧ್ಯಯನ ನಡೆಸಿದ್ದರಿಂದ ನಿರ್ದೇಶಕ ರಾಮ್.ಜೆ.ಚಂದ್ರ ಅದನ್ನು ಹಾಗೆಯೇತೆರೆ ಮೇಲೆ ತರುವಲ್ಲಿ ಸಪಲರಾಗಿದ್ದಾರೆ.  ಪಾರಾನಾಯ್ಡ್ ಸ್ಕಿಜೋಫ್ರೀನಿಯಾ ತರದ  ಖಾಯಿಲೆ ಬಗ್ಗೆ ಜನರಲ್ಲಿ ಒಂದಷ್ಟು ಜಾಗೃತಿ ಮಾಡಿಸುವ ಚಿತ್ರವಾಗಿರುವುದು ಹೆಮ್ಮೆಯ ವಿಷಯ. ನೋಬಿಲ್‌ ಪೌಲ್  ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಗಾದೆ ಮಾತು ಶೀರ್ಷಿಕೆಯಾಗಿ ಬಳಸಿರುವುದು ಪೂರಕವಾಗಿದೆ.

3/5

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed