ವಿದೇಶದಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ಮರು ಬಿಡುಗಡೆ
Posted date: 27 Tue, Nov 2018 – 08:24:19 AM

ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೂಲಕವೇ ವಿದೇಶದಲ್ಲಿರೋ ಕನ್ನಡಿಗರಿಗೆ ಕರ್ಣನನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲು ಜಾಕ್ ಮಂಜು ಮುಂದಾಗಿದ್ದಾರೆ. ಈ ಮೂಲಕವೇ ಅಂಬರೀಶ್ ಅವರು ಬದುಕಿದ ರೀತಿಯನ್ನು ಗೌರವಿಸುವ, ಅವರ ಆದರ್ಶಗಳನ್ನು ಪರಿಪಾಲಿಸುವ ನಿರ್ಧಾರವೊಂದನ್ನೂ ಜಾಕ್ ಮಂಜು ಪ್ರಕಟಿಸಿದ್ದಾರೆ.
ವಿದೇಶಗಳಲ್ಲಿ  ಅಂಬಿ ನಿಂಗೆ ವಯಸಾಯ್ತೋ ಬಿಡುಗಡೆಯಿಂದ ಬಂದ ಹಣವನ್ನು ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಜೀವನದುದ್ದಕ್ಕೂ ಕೊಡುಗೈ ದಾನಕ್ಕೆ ಹೆಸರಾಗಿದ್ದ ಅಂಬರೀಶ್ ಅವರ ಆದರ್ಶಗಳನ್ನು ಪಾಲಿಸುತ್ತಿರುವ ನಿರ್ಮಾಪಕರ ಕಾರ್ಯ ನಿಜಕ್ಕೂ ಶ್ಲಾಘನೀಯ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed