ವೀರ ಮಹಾದೇವಿ ಸನ್ನಿ ಲಿಯೋನ್ ಬಹುಭಾಷಾ ಚಿತ್ರ
Posted date: 24 Thu, May 2018 – 08:50:53 AM
ಕನ್ನಡದಲ್ಲಿ ಸನ್ನಿ ಲಿಯೋನ್ ಅವರು ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ೧೦೦ ಕೋಟಿ ರೂಪಾಯಿ ವೆಚ್ಚದ ಐದು ಭಾಷೆಗಳ ಚಿತ್ರದಲ್ಲಿ ಸನ್ನಿ ಲಿಯೋನ್ ಅವರು ‘ವೀರ ಮಹಾದೇವಿ’ ಆಗಿ ಖಡಕ್ ಆಗಿ ಮಿಂಚಾಲಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾ ವಿ ಸಿ ವಡಿವುದೈಯನ್ ಅವರ ನಿರ್ದೇಶನದಲ್ಲಿ, ಪೊಸ್ಸೇ ಸ್ಟೀಫನ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಚಿತ್ರ ೧೫೦ ದಿವಸಗಳ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಸನ್ನಿ ಲಿಯೋನ್ ಈ ಚಿತ್ರಕ್ಕೆ ಕುದುರೆ ಸವಾರಿ, ಕತ್ತಿ ವರಸೆ ವಿಶೇಷವಾಗಿ ಕಲಿತಿದ್ದಾರೆ. ತಮಿಳು ನಟ ನಾಜರ್ ಅಲ್ಲದೆ ಕನ್ನಡ, ತೆಲುಗು, ಮಲಯಾಳ ಭಾಷೆಗಳ ನಟರುಗಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಚಿತ್ರದ ಯುದ್ದ ಸನ್ನಿವೇಶಗಳಿಗೆ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳು ನಾಡು ರಾಜ್ಯಗಳಿಂದ ಕುದುರೆ ಹಾಗೂ ಆನೆಗಳನ್ನು ಒಟ್ಟು ಸೇರಿಸಿ ಅದ್ಬುತವಾಗಿ ಚಿತ್ರೀಕರಣ ಮಾಡಲಾಗುವುದು. ಇದಕ್ಕಾಗಿ ಸಹ ಕಲಾವಿದರಿಗೆ ತರಬೇತಿ ಸಹ ಒದಗಿಸಲಾಗಿದೆ. ಕೇರಳ ರಾಜ್ಯದ ಕಾಡುಗಳಲ್ಲಿ ಚಿತ್ರಕ್ಕೆ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುವುದು. ರಾಮೋಜೀ ಫಿಲ್ಮ್ ಸಿಟಿಯಲ್ಲಿ ಬಹು ದೊಡ್ಡ ಸೆಟ್ ಸಹ ಈ ಚಿತ್ರಕ್ಕೆ ಉಪಯೋಗ ಆಗಲಿದೆ.
‘ವೀರ ಮಹಾದೇವಿ’ ಚಿತ್ರಕ್ಕೆ ಯುದ್ದದ ಸನ್ನಿವೇಶಗಳು ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಬಳಕೆ ಆಗಲಿದೆ. ಕೆನಡಾ ದೇಶದ ತಂತ್ರಜ್ಞರನ್ನು ಈ ಮಹೋನ್ನತ ಕೆಲಸಕ್ಕೆ ಬಳಕೆ ಮಾಡಲಾಗುವುದು. ಇದಕ್ಕಾಗಿಯೇ ೪೦ ಕೋಟಿ ರೂಪಾಯಿ ಸಹ ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ.
ಸನ್ನಿ ಲಿಯೋನ್ ಅವರ ೧೫೦ ದಿವಸಗಳ ಸಮಯವನ್ನು ಈ ಚಿತ್ರಕ್ಕೆ ಮುಡುಪಾಗಿಟ್ಟಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅವರು ಎಲ್ಲರ ಜೊತೆ ಬೆರೆತು ಸಾಮಾನ್ಯವಾಗಿ ಹೊಂದಿಕೊಡಿದ್ದಾರೆ.
‘ವೀರ ಮಹಾದೇವಿ’ ಚಿತ್ರದ ಫಸ್ಟ್ ಲುಕ್ ಸಹ ಈಗಾಗಲೇ ಬಿಡುಗಡೆ ಆಗಿದೆ ಎಂದು ಚಿತ್ರ ತಂಡ ತಿಳಿಸಿದೆ. ತಂತ್ರಜ್ಞರ ಪಟ್ಟಿಯಲ್ಲಿ ಅಂಬರೀಶ್, ದತ್ತಾಶ ಎ ಪಿಳ್ಳೈ, ರಿಜೋಯ್ಸ್ ಹಾಗೂ ಇತರರು ಸೇರಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed