ಸೆನ್ಸಾರ್ ಮಂಡಲಿ ವೀಕ್ಷಿಸಿದ `ಜಾಲಿಡೇಸ್`
Posted date: 15/January/2009
ಯಂಗ್ ಡ್ರೀಂಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ `ಜಾಲಿಡೇಸ್` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಯಾವುದೇ ಭಾಗಕ್ಕೂ ಮಂಡಲಿಯಿಂದ ಕತ್ತರಿ ಪ್ರಯೋಗವಾಗಿಲ್ಲ. ಬದಲಾಗಿ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ ಎಂದು ನಿರ್ಮಾಪಕ ಮಾದಿರೆಡ್ಡಿ ಪರಮ್ ತಿಳಿಸಿದ್ದಾರೆ.
ನಿಗದಿತ ಯೋಜನೆಯಂತೆ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರೈಸಿರುವ `ಜಾಲಿಡೇಸ್`ನ ಹಾಡುಗಳು ಎಲ್ಲರೂ ಗುನುಗುವಂತಿದೆ. ಚಿತ್ರದ ಧ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿದ ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಿಕ್ಕಿ ಜೆ ಮಯೂರ್ ಅವರ ಸಂಗೀತವಿದೆ. ಸೌಂದರ್ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಕವಿರಾಜ್ ಗೀತರಚನೆ ಹಾಗೂ ರಂಸ್ವಾಮಿ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಶ್ವಾಸ್, ದೀಪು, ಪ್ರವೀಣ್, ನಿರಂಜನ್, ಐಶ್ವರ್ಯನಾಗ್ ಮುಂತಾದವರಿದ್ದಾರೆ. ಕಮಿಂಗ್ ಡೇಸ್ನಲ್ಲಿ `ಜಾಲಿಡೇಸ್` ಚಿತ್ರವನ್ನು ಬಿಡುಗಡೆ ಮಾಡುವ ತಯಾರಿ ನಿರ್ಮಾಪಕರಿಂದ ನಡೆದಿದೆ.