1980 ರಲ್ಲಿ ಪ್ರಿಯಾಂಕ ಉಪೇಂದ್ರ
Posted date: 19 Mon, Oct 2020 – 01:37:16 PM

ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಪ್ರಿಯಾಂಕ ಉಪೇಂದ್ರ ಅಭಿನಯದ 1980 ಎಂಬ ಶೀರ್ಷಿಕೆಯ ಚಿತ್ರ ಇದೇ ಅಕ್ಟೋಬರ್ 28 ರಿಂದ ಆರಂಭವಾಗಲಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ‌ ಸುಂದರ ಪರಿಸರದಲ್ಲಿ ನಡೆಯಲಿದೆ.
ಸವಾರಿ 2, ವಸಂತ ಕಾಲ, ಮಿಸಡ್ ಕಾಲ್, ಪರಿಧಿ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಪ್ರಿಯಾಂಕ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ  ಶರ್ಮ ಮುಂತಾದವರಿದ್ದಾರೆ.
ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed