?ಗುಲಾಬಿ ಟಾಕೀಸು? ಈಗ ಟೂರಿಂಗ್ ಟಾಕೀಸಾಗಿದೆ.
Posted date: 31/December/2008

ಓಷಿಯನ್ ನವರ ಏಷಿಯನ್ ಚಿತ್ರೋತ್ಸವದಲ್ಲಿ ಶ್ರೇಷ್ಠ ಭಾರತೀಯ ಚಿತ್ರ ಪ್ರಶಸ್ತಿ ಗೆದ್ದು, ಕನ್ನಡದ ಹೆಮ್ಮೆಯ ನಟಿ ಉಮಾಶ್ರೀಗೆ ಶ್ರೇಷ್ಠ ಭಾರತೀಯ ನಟಿ ಪ್ರಶಸ್ತಿ ತಂದು ಕೊಟ್ಟ ಬಸಂತ್ ಕುಮಾರ್ ಪಾಟೀಲರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ನಿರ್‍ದೇಶಿಸಿದ ಗುಲಾಬಿ ಟಾಕೀಸು ಕನ್ನಡ ಚಿತ್ರವು ಜನವರಿ ೮, ೨೦೦೯ ರಿಂದ ಆರಂಭವಾಗಲಿರುವ ಪುಣೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್‍ಧಾತ್ಮಕ ವಿಭಾಗದಲ್ಲಿ ಭಾರತದವನ್ನು ಪ್ರತಿನಿಧಿಸಲು ಆಯ್ಕೆಯಾಗಿದೆ. ಗುಲಾಬಿ ಟಾಕೀಸು ಭಾರತವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲಲ್ಲ. ಓಷಿಯಾನ್ ನಂತರ, ಅಬು ಧಾಬಿಯಲ್ಲಿ ನಡೆದ ಮಿಡ್ಲ್ ಈಸ್ಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಶವದಲ್ಲಿ ಭಾರತದಿಂದ ಆಯ್ಕೆಯಾದ ಏಕ ಮಾತ್ರ ಚಿತ್ರವಾಗಿತ್ತು. ಅದಲ್ಲದೆ ಈ ಮೊದಲು ಸೋವಿಯತ್ ರಶ್ಯಾದ ಭಾಗವಾಗಿದ್ದ ಎಸ್ತೋನಿಯಾದ ಬ್ಲಾಕ್ ನೈಟ್ ಚಿತ್ರೋತ್ಸವದಲ್ಲಿ, ಕೇರಳದಲ್ಲಿ ನಡೆದ ಟ್ರಿವೇಂಡ್ರಂ ಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿತ್ತು. ಜನವರಿ ಅಂತ್ಯದಲ್ಲಿ ಹಾಲೆಂಡ್‌ನಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ರೋಟರ್ ಡ್ಯಾಂ ಚಿತ್ರೋತ್ಸವದಲ್ಲಿ, ಫ಼ೆಬ್ರವರಿಯಲ್ಲಿ ಫ಼ಾನ್ಸ್ ನ ವೆಸೋಲ್ ನಲ್ಲಿ ನಡಿಯಲಿರುವ ಚಿತ್ರೋತ್ಸವದಲ್ಲಿ, ಮಾರ್ಚ್ ನಲ್ಲಿ ಸ್ವಿತ್ಜರ್ಲ್ಯಾಂಡ್‌ನ ಫ಼್ರಿ ಬೌರ್ಗ್ ಚಿತ್ರೋತ್ಸವದಲ್ಲಿ, ಏಪ್ರಿಲ್ ನಲ್ಲಿ ಸಿಂಗಾಪುರದ ಅಂತಾರಾಷ್ಟ್ರಿಯ ಚಲನ ಚಿತ್ರೋತ್ಸವದಲ್ಲಿ, ಮೇ ನಲ್ಲಿ ಇಂಗ್ಲೇಂಡಿನ ಎಡಿನ್‌ಬರೋ ಚಲನ ಚಿತ್ರೋತ್ಸವದಲ್ಲಿ, ಹಾಗೂ ಜೂನ್ ನಲ್ಲಿ ಸ್ಪೈನ್ ನ ಮ್ಯಾಡ್ರಿಡ್ ಚಿತ್ರೋತ್ಸವದಲ್ಲಿ ಮತ್ತು ಗ್ರ್ಯಾನಡಾ ಚಿತ್ರೋತ್ಸವದಲ್ಲೂ ಈ ಚಿತ್ರ ಭಾರತವನ್ನು ಪ್ರತಿನಿಧಿಸಲಿದೆ. ಇದಲ್ಲದೇ ಈ ಚಿತ್ರ ದೆಹಲಿ, ಕೊಲ್ಕತ್ತಾ, ಮುಂಬೈ, ಗೋವಾ, ಕೇರಳ, ಚೆನ್ನೈ, ಬೆಂಗಳೂರು, ತಿರುಚ್ಚಿ, ಗೌಹಾತಿ, ಗೋರಖ್ ಪುರ್ ಹಾಗೂ ಪುಣೆ ಚಿತ್ರೊತ್ಸವಗಳಿಗೆ ಆಯ್ಕೆ ಯಾಗುವ ಮೂಲಕ ಭಾರತದ ಎಲ್ಲಾ ಚಿತ್ರೋತ್ಸವಗಳಿಗೂ ಆಯ್ಕೆಯಾದ ಏಕಮಾತ್ರಾ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಖ್ಯಾತ ಕತೆಗಾರ್ತಿ ವೈದೇಹಿಯವರ ಕಿರುಗತೆ ಆಧರಿಸಿದ ಈ ಚಿತ್ರಕ್ಕೆ ರಾಮಚಂದ್ರ ಐತಾಳ ರ ಛಾಯಗ್ರಹಣ, ಎಂ ಎನ್ ಸ್ವಾಮಿಯವರ ಸಂಕಲನ, ಐಸಾಕ್ ಥಾಮಸ್ ರ ಸಂಗಿತ ಇದ್ದು, ಉಮಾಶ್ರೀ, ಕೆ.ಜಿ.ಕೃಷ್ಣಮೂರ್ತಿ, ಪಲ್ಲವಿ, ಅಶೋಕ್ ಸಂದೀಪ್ ಅಲ್ಲದೇ ಅನೇಕ ಕರಾವಳಿ ಕರ್ನಾಟಕದ ಕಲಾವಿದರನ್ನೂ ಒಳಗೊಂಡಿರುವ ಈ ಗುಲಾಬಿ ಟಾಕೀಸು ಈಗ ಟೂರಿಂಗ್ ಟಾಕೀಸ್ ಆಗಿದೆ. ಇಷ್ಟೊಂದು ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರವೂ ಇದಾಗಿದ್ದು, ಕನ್ನಡ ವಾಕ್ ಚಿತ್ರ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಈ ಸಾಧನೆ ಮಾಡಿದ್ದಕ್ಕೆ ನಿರ್ಮಾಪಕ ಬಸಂತ ಕುಮಾರ್ ಪಾಟೀಲ್, ನಿರ್ದೇಶಕ ಗಿರೀಶ ಕಾಸರವಳ್ಳಿ ಹಾಗೂ ಗುಲಾಬಿ ಟಾಕೀಸು ಚಿತ್ರ ತಂಡ ಹರ್ಷ ವ್ಯಕ್ತ ಪಡಿಸಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed