?ಚೆಲುವೆಯೇ ನಿನ್ನೇ ನೋಡಲು? ಈ ವಾರ ತೆರೆಗೆ
Posted date: 4/August/2010

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಬಹು ಕೋಟಿ ನಿರ್ಮಾಣದ, ಬಹು ತಾರಾಗಣದ ವಿಶ್ವದ ಏಳು ಅದ್ಭುತಗಳಲ್ಲಿ ತಯಾರಾಗಿರುವ ಶ್ರೀ ತುಳಜಾ ಭವಾನಿ ಕ್ರಿಯೇಶನ್ಸ್ ನಿರ್ಮಾಪಕ
ಎನ್. ಎಮ್. ಸುರೇಶ್ ಅವರ ’ಚೆಲುವೆಯೇ ನಿನ್ನೇ ನೋಡಲು’ ಕರ್ನಾಟಕದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ವಿಶ್ವದ ಏಳು ಅದ್ಭುತಗಳಲ್ಲಿ ಚಿತ್ರೀಕರಣಗೊಂಡಿರುವ ಈ ಕನ್ನಡ ಚಿತ್ರ ಹಲವಾರು ವಿಶೇಷಗಳನ್ನು ತುಂಬಿಕೊಂಡಿದೆ.

ವಿಶ್ವದ ಏಳು ಅದ್ಭುತಗಳಾದ ಪೆಟ್ರಾ, ಅಮಾನ್ ಸಿಟಿ, ಇಟಲಿಯ ರೋಮ್, ಟಸ್ಕಾನಿ, ದುಬೈನ ಬುರ್ಚಖಲೀಫ್(ವಿಶ್ವದ ಅತಿ ಎತ್ತರ ಕಟ್ಟಡ), ಫ್ರಾನ್ಸನ ಐಫೆಲ್ ಟವರ್, ಆಗ್ರಾದ ತಾಜ್ಮಹಲ್, ಬೆಂಗಳೂರಿನ ಕೆಲವು ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಧ್ವನಿಸುರುಳಿಯ ಜೊತೆ ಚಿತ್ರದ ತುಣುಕುಗಳ ವಿಡಿಯೋ ಸಿಡಿ ಕೂಡ ನೀಡಲಾಗಿದೆ.
ಚಿತ್ರಕ್ಕೆ ಡಿಜಿಟಲ್ ಇಂಟರ್‌ಮೀಡಿಯಟ್ ತಂತ್ರಜ್ಞಾನವನ್ನು ಮುಂಬೈನ ಪ್ರತಿಷ್ಠಿತ ಆಡ್‌ಲ್ಯಾಬ್‌ನಲ್ಲಿ ಮಾಡಲಾಗಿದೆ. ಇದೇ ಸ್ಥಳದಲ್ಲಿ ಹಿಂದಿಯ ಕೈಟ್ಸ್, ರಾವಣನ್ ಹಾಗೂ ಗಜನಿ ಚಿತ್ರಗಳಿಗೂ ತಂತ್ರಜ್ಙಾನ ಬಳಸಲಾಗಿದೆ.
ಮೈಸೂರಿನ ರಘುರಾಮ್ ಮಹತ್ತರ ಜವಾಬ್ದಾರಿಯನ್ನು ಹೊತ್ತು ಈ ಚಿತ್ರದ ಮುಖಾಂತರ ನಿರ್ದೇಶಕರಾಗುತ್ತಿದ್ದಾರೆ.
ಮುಂಬೈನ ಸೋನಲ್ ಚೌಹಾಣ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.
ಈ ಚಿತ್ರದಲ್ಲಿ ಹ್ಯಾಟ್ರಕ್ ಹೀರೋ ಶಿವರಾಜ್‌ಕುಮಾರ್ ಪ್ರಧಾನ ಪಾತ್ರದಲ್ಲಿ ಇದ್ದು ನಾಯಕರುಗಳಾದ ರಮೇಶ್‌ಅರವಿಂದ, ನೆನಪಿರಲಿ ಪ್ರೇಮ್, ತರುಣ್ ಸುಧೀರ್ ಅಲ್ಲದೇ ಮೂವರು ನಾಯಕಿಯರಾದ ಹರಿಪ್ರಿಯಾ, ಕಾವ್ಯ, ಸಂಗೀತ ಅಭಿನಯಿಸಿದ್ದಾರೆ.
ಹ್ಯಾಟ್ರಕ್ ಹೀರೋ ಶಿವರಾಜ್‌ಕುಮಾರ್ ನಾಗಾವಾರ ನಿವಾಸದಲ್ಲಿ ಅವರು ಹನ್ನೊಂದು ಬಗೆ ಬಗೆಯ ಅಣ್ಣಾವ್ರ ವಿವಿಧ ಸಿನಿಮಾಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರೀಕರಣ ಏಪ್ರಿಲ್ ೨೪, ೨೦೦೯..... ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು....... ಹಾಡಿನ ದೃಶ್ಯಗಳ ಮಧ್ಯೆ ಇಡೀ ತಂಡ ಡಾ. ರಾಜ್ ಅವರ ಜನ್ಮದಿನ ಆಚರಿಸಿ ನಾಯಕ ಶಿವರಾಜ್‌ಕುಮಾರ್ ಕೇಕ್ ತುಂಡನ್ನು ಆಕಾಶಕ್ಕೆ ತೋರಿಸಿ ಹ್ಯಾಪಿ ಬರ್ತಡೇ ಅಪ್ಪಾಜಿ ಎಂದದ್ದು ಮರೆಯಲಾಗದ ಕ್ಷಣ.
ಈ ಚಿತ್ರಕ್ಕಾಗಿ ಹೆಸರಾಂತ ನಿರ್ದೇಶಕರುಗಳಾದ ಎಸ್. ನಾರಾಯಣ, ಯೋಗರಾಜ್ ಭಟ್, ನಾಗತಿಹಳ್ಳಿ ಚಂದ್ರಶೇಖರ್, ನಾಗೇಂದ್ರ ಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ.
ಈ ಚಿತ್ರದ ಬಿಡುಗಡೆಯಾದ ೫ ಪ್ರಮುಖ ನಗರಗಳ ಚಿತ್ರಮಂದಿರಗಳ ಆವರಣದಲ್ಲಿ ಶಿವರಾಜ್‌ಕುಮಾರ್ ಅಭಿನಯದ ಚಿತ್ರಗಳ ಹಾಡುಗಳನ್ನು ಏರ್ಪಡಿಸಲಾಗುವುದು.
ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಹಾಗೂ ಇನ್ನಿತರ ನಗರಗಳಲ್ಲಿ  ಶಿವರಾಜ್‌ಕುಮಾರ್ ಅಭಿನಯದ ಚಿತ್ರಗಳ ಛಾಯಾಚಿತ್ರ ಪ್ರದರ್ಶನವನ್ನು - ಆನಂದ್‌ನಿಂದ ಜೋಗಯ್ಯವರೆಗೂ ಏರ್ಪಡಿಸಲಾಗುವುದು.
ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಮುಂದೆ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಆಕೃತಿಯನ್ನು ಸ್ಥಾಪಿಸಲಾಗುವುದು.
ಒಂದೂವರೆ ವರ್ಷದಲ್ಲಿ ಶ್ರಮ ಶ್ರದ್ಧೆ ಆಸಕ್ತಿ ಹೊಸತಿನ ಹಂಬಲದೊಂದಿಗೆ ತಯಾರಾಗಿ ಮನೆ ಮಂದಿಯೆಲ್ಲಾ ನೋಡಬಹುದಾದ ಚಿತ್ರ ಇದು.
ಡಾ. ರಾಜ್ ಅವರ ನಿಜಜೀವನದ ನವೀಕರಿಸಲಾದ ಕೆಲವು ಸನ್ನಿವೇಶಗಳಲ್ಲಿ ಅವರ ಪುತ್ರ ಶಿವರಾಜ್‌ಕುಮಾರ್ ಅಭಿನಯಿಸಿರುವುದು ಹೆಗ್ಗಳಿಕೆಯ ವಿಚಾರ.


ಇವೆಲ್ಲಾ ಮೇಲಿನ ವಿಶೇಷಗಳೊಂದಿಗೆ ಪ್ರೇಕ್ಷಕ ಮಹಾಪ್ರಭುವಿನ ಮುಂದೆ ಬರುತ್ತಿರುವ ’ಚೆಲುವೆಯೇ ನಿನ್ನೇ ನೋಡಲು’,,,,, ಛಾಯಾಗ್ರಹಣವನ್ನು ಪ್ರಸಿದ್ಧ ಕಬೀರ್ ಲಾಲ್ ನಿರ್ವಹಿಸಿದ್ದಾರೆ. ೫ ಹಾಡುಗಳಿಗೆ ಮಾಧುರ‍್ಯಕ್ಕೆ ಹಾಗೂ ಯುವಪೀಳಿಗೆಗೆ ಹುಚ್ಚೆಬ್ಬಿಸುವ ತಾಕತ್ತಿರುವ ವಿ, ಹರಿಕೃಷ್ಣ ರಾಗಸಂಯೋಜನೆ ಮಾಡಿದ್ದಾರೆ.

ಪೋಷಕ ಕಲಾವಿದರಾಗಿ ದತ್ತಣ್ಣ, ವಿನಯಾ ಪ್ರಸಾದ್, ಎಡಕಲ್ಲು ಚಂದ್ರಶೇಖರ್, ಶಾಂತಮ್ಮ, ವೆಂಕಟೇಶ್ ಪ್ರಸಾದ್, ಚಿತ್ರಾ ಶೆಣೈ ಇನ್ನಿತರರು ಇದ್ದಾರೆ.

ನಿರ್ದೇಶಕ ರಘುರಾಮ್ ಅವರಿಗೆ ಸಹಾಯಕರಾಗಿ ಮೋಹನ್ ಮಾಳಗಿ, ನಾಗರಾಜ್ ಧರಣಿ ದುಡಿದಿದ್ದಾರೆ. ನೃತ್ಯ ನಿರ್ದೇಶಕರಾಗಿ ರಾಮು ಹಾಗೂ ಇಮ್ರಾನ್ ಸರ್ದಾರಿಯ, ಸಂಭಾಷಣೆಯನ್ನು ಚಿಂತನ್ ಬರೆದಿದ್ದಾರೆ ಹಾಗೂ ಸಂಕಲನವನ್ನು ಎಸ್. ಮನೋಹರ್ ಮಾಡಿದ್ದಾರೆ.


’ಚೆಲುವೆಯೇ ನಿನ್ನೇ ನೋಡಲು’........ ದಿ ವಂಡರ‍್ಸ್ ಆಫ್ ಲವ್ ಪ್ರೇಕ್ಷಕನ ಮಡಿಲಿಗೆ ಹಾಕುತಿದ್ದಾರೆ ನಿರ್ಮಾಪಕ ಎನ್. ಎಮ್. ಸುರೇಶ್.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed