ಸಂಸಾರದಲ್ಲಿ ಗೋಲ್ ಮಾಲ್? ತಾಂತ್ರಿಕ ಲೇಪನ
Posted date: 09 Wed, May 2012 ? 08:22:40 AM

ಹಾಕಿದ ಯೋಜನೆಯಂತೆ ಚಿತ್ರೀಕರಣ ಮುಗಿಸಿ ಡಬ್ಬಿಂಗ್, ಡಿ.ಟಿ.ಎಸ್. ಹಾಗೂ ರಿರೇಕಾರ್ಡಿಂಗ್ ಕೆಲಸಗಳನ್ನು ನಿರ್ದೇಶಕ ಸಾಯಿ ಪ್ರಕಾಶ್ ಅವರು ರಾಜೇಶ್ ರಾಮನಾಥನ್ ಅವರ ಸ್ಟುಡಿಯೋದಲ್ಲಿ ಮುಗಿಸಿ ಈಗ ಮೊದಲ ಪ್ರತಿಯ ಹಂತ ’ಸಂಸಾರದಲ್ಲಿ ಗೋಲ್ ಮಾಲ್’ ಚಿತ್ರ ತಲುಪಿದೆ.

ಸಾಮಾಜಿಕ ಚಿತ್ರಗಳಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ಸಾಯಿಪ್ರಕಾಶ್ ಸಂಸಾರದಲ್ಲಿ ಗೋಲ್ ಮಾಲ್ ಚಿತ್ರಕ್ಕೆ ೫ ಸತಿಪತಿಯರ ನಡುವಿನ ಕಿತಾಪತಿ ಇಟ್ಟುಕೊಂಡು ತಯಾರಿಸಿರುವ ಚಿತ್ರ  ದಾಸರಿ ನಾರಾಯಣ್ ರಾವ್ ಅವರ ’ಆದಿ ವಾರಂ ಅಡವಾಡಿಕೆ ಸೆಲ್ವಂ ಕಾವಾಲಿ’ ಚಿತ್ರದಿಂದ ಸ್ಫೂರ್ತಿ ಪಡೆಯಲಾಗಿದೆ.
 
೫ ಸತಿಪತಿಗಳಾಗಿ ಊಮಾಶ್ರೀ ಹಾಗೂ ರಾಜು ತಾಳೀಕೋಟೆ, ಮೋಹನ್ ಮತ್ತು ಅನು ಪ್ರಭಾಕರ್, ಸಿಹಿಕಹಿ ಚಂದ್ರು ಹಾಗೂ ತಾರಾ, ತಬಲಾ ನಾಣಿ ಮತ್ತು ಲಕ್ಷ್ಮಿ ಭಾಗವತರ್, ಸಾಧು ಕೋಕಿಲ ಹಾಗೂ ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳು ಹಾಸ್ಯಮಯವಾಗಿದ್ದು ಎಲ್ಲಾ ಕಲಾವಿದರುಗಳಿಗೂ ಸಮಾನವಾದ ಅವಕಾಶವು ಇದೆ. ಈ ಚಿತ್ರದ ಹಾಡೊಂದರಲ್ಲಿ ಮಲೆಯಾಳಂ ಚಿತ್ರದ ಶಕೀಲಾ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ೨೦ ಜನಪ್ರಿಯ ಗೀತೆಗಳನ್ನು ಆಯ್ದು ಅದರ ತುಣುಕುಗಳನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ. ಸಾಧು ಕೋಕಿಲ ಈ ಚಿತ್ರದ ಸಂಗೀತ ನಿರ್ದೇಶಕರು.

ಈ ಹಿಂದೆ ೩ನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ ಚಿತ್ರ ನಿರ್ಮಿಸಿದ ಪ್ರಭಾಕರ್ ರೆಡ್ಡಿ ಈ ಚಿತ್ರದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed