`ನವರಸ ನಟನ ಅಕಾಡೆಮಿ` ಎರಡನೇ ವರ್ಷಕ್ಕೆ ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ
Posted date: 01 Tue, Jan 2019 – 10:44:41 AM

ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಾಲೂರು ಶ್ರೀನಿವಾಸ್, ಕಳೆದ ವರ್ಷ ‘ನವರಸ ನಟನ ಅಕಾಡೆಮಿ ಸಂಸ್ಥೆ ಸ್ಥಾಪಿಸಿದ್ದರು. ಇದೀಗ ಆ ಸಂಸ್ಥೆ ಎರಡನೇ ವಸಂತಕ್ಕೆ ಕಾಲಿಡುತ್ತಿದೆ. ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ ಈ ಅಕಾಡೆಮಿ, ಕಳೆದ ಒಂದು ವರ್ಷದಲ್ಲಿ ಒಟ್ಟು ಮೂರು ಬ್ಯಾಚ್ ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಸ್ವಿಮ್ಮಿಂಗ್, ಡಾನ್ಸಿಂಗ್, ಫೈಟಿಂಗ್ ಮತ್ತು ಚಿತ್ರೀಕರಣದ ಅನುಭವ, ಚಿತ್ರೀಕರಣೇತರ ಅನುಭವವನ್ನು ಕಲಿಸಿಕೊಟ್ಟಿದೆ. ಇದೇ ಫೆಬ್ರವರಿ ೧೦ರಿಂದ ಎರಡನೇ ವರ್ಷದ ಮೊದಲ ಬ್ಯಾಚ್ ಶುರುವಾಗಲಿದೆ.

‘ನಟನೆ ಮತ್ತು ನಿರ್ದೇಶನದ ಬಗ್ಗೆ ತಿಳಿದುಕೊಳ್ಳಲು ಬರುವ ಆಸಕ್ತ ವಿದ್ಯಾರ್ಥಿಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬರೀ ಪುಸ್ತಕದಲ್ಲಿರುವುದನ್ನು ಬೋಧಿಸದೇ, ಪ್ರಾಕ್ಟಿಕಲ್ ಆಗಿಯೂ ಸಾಕಷ್ಟು ಅಂಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಸಂಸ್ಥೆಯನ್ನು ನಿರ್ಮಿಸಲಾಗಿತ್ತು. ಪ್ರಾಂಶುಪಾಲರಾದ ಎಸ್. ನಾರಾಯಣ್ ಅವರ ನೇತೃತ್ವದಲ್ಲಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಖುಷಿಯಿದೆ. ಇದರ ಜೊತೆಗೆ ನುರಿತ ನಿರ್ದೇಶಕರು, ತಂತ್ರಜ್ಞರಿಂದ ಆಯಾ ವಿಭಾಗದ ಬಗ್ಗೆ ಪಾಠ ಮಾಡಿಸುವುದರ ಜೊತೆಗೆ ಅವರ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದೇವೆ. ಮೊದಲ ವರ್ಷದಲ್ಲಿ ನೂರಾರು ಸ್ಟೂಡೆಂಟ್ಸ್ ನಮ್ಮ ಅಕಾಡೆಮಿಯಲ್ಲಿ ಕಲಿತು ಇಂದು ಕಿರುತೆರೆ, ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ಶಾರ್ಟ್ ಫಿಲಂ ಮಾಡಿ ಮುಂದಿನ ಗುರಿಯತ್ತ ಮುಖ ಮಾಡಿದ್ದಾರೆ ಎಂಬ ಖುಷಿಯಿದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್.    ಹಿರಿಯ ನಿರ್ದೇಶಕ ಹಾಗೂ ಅಕಾಡೆಮಿಯ ಪ್ರಾಂಶುಪಾಲರಾದ ಎಸ್. ನಾರಾಯಣ್ ಎರಡನೇ ವರ್ಷಕ್ಕೆ ಕೆಲವೊಂದು ಹೊಸ ಯೋಜನೆ ಹಮ್ಮಿಕೊಂಡಿದ್ದಾರೆ. ಆ ಪೈಕಿ ಮೇಕಪ್, ಎಡಿಟಿಂಗ್ ಹಾಗೂ ಕಲಾ ವಿಭಾಗದ ಬಗ್ಗೆ ಹೆಚ್ಚು ಮಾಹಿತಿಯನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, ‘ಇಲ್ಲಿಗೆ ಬರುವ ವಿದ್ಯಾರ್ಥಿಗಳು ನಾನಾ ಕನಸುಗಳನ್ನು ಹೊತ್ತು ಬಂದಿರುತ್ತಾರೆ. ಅವರನ್ನೆಲ್ಲಾ ಒಂದು ಹಂತಕ್ಕೆ ತಂದು, ಅವರ ಭವಿಷ್ಯಕ್ಕೆ ಅಡಿಗಲ್ಲು ಹಾಕುವುದು ನಮ್ಮ ಉದ್ದೇಶ. ಅಂತೆಯೇ ನಮ್ಮ ಅಕಾಡೆಮಿಯಲ್ಲಿ ಕಲಿತು ಹೋದವರು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡನೇ ವರ್ಷದಲ್ಲಿ ಮತ್ತಷ್ಟು ಪ್ರತಿಭೆಗಳು ‘ನವರಸ ನಟನ ಅಕಾಡೆಮಿ ಮೂಲಕ ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ.ನಿರ್ದೇಶಕರಾದ ಎಸ್. ಮಹೇಂದರ್, ಲಕ್ಕಿ ಶಂಕರ್ ಹಾಗೂ ನೀನಾಸಂ ಬಳಗದ ನುರಿತವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸಿ ಅರ್ಹತಾ ಪತ್ರ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತದೆ ನವರಸ ನಟನ ಅಕಾಡೆಮಿ.ನಾಲ್ಕು ಮತ್ತು ಆರು ತಿಂಗಳ ನಟನೆ ಹಾಗೂ ನಿರ್ದೇಶನದ ಕೋರ್ಸ್ ಹಾಗೂ ವಾರಾಂತ್ಯದ ತರಗತಿಗಳು ಅಕಾಡೆಮಿಯಲ್ಲಿ ನಡೆಯಲಿದ್ದು, ಜನವರಿಯಲ್ಲಿ ಸದಾಶಿವನಗರದಲ್ಲಿರುವ ‘ನವರಸ ನಟನ ಅಕಾಡೆಮಿ’ಯಲ್ಲಿ ಆಡಿಷನ್ ನಡೆಯಲಿದೆ. ತರಗತಿಗಳು ಫೆಬ್ರವರಿ ೧೦ರಿಂದ ಶುರುವಾಗಲಿದೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed