`ಬಣ್ಣಬಣ್ಣದಲೋಕ`ದಲ್ಲಿ ಅಕ್ಕ - ತಂಗಿ
Posted date: 31/December/2008

ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತು ರೂಢಿಯಲ್ಲಿದೆ. ಆದರೆ ಈ ಮಾತು ಅಕ್ಕ-ತಂಗಿಯರಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಸಹೋದರಿಯರಲ್ಲಿ ಮಾತ್ಸರ್ಯದ ಗುಣಗಳು ಕಡಿಮೆ. ಇಬ್ಬರಲ್ಲಿ ಯಾರಿಗಾದರೂ ಕಷ್ಟ-ಸುಖ ಎದುರಾದಾಗ ಪರಸ್ಪರ ಸಂಭಾಷಣೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.
ರಾಂಪ್ರಸಾದ್ ಅವರು ನಾಯಕನಾಗಿ ಅಭಿನಯಿಸುವುದರೊಂದಿಗೆ ನಿರ್ದೇಶನದ ಹೊಣೆ ಹೊತ್ತಿರುವ `ಬಣ್ಣಬಣ್ಣದಲೋಕ` ಚಿತ್ರದಲ್ಲೂ ಇದೇರೀತಿ. ನಾಯಕಿ ಶ್ರಾವಣಿ ಬಳಿ ಸೋದರಿ ರೂಪ ತನ್ನ ಕಾಲೇಜಿನಲ್ಲಿ ನಡೆದ ವೃತ್ತಾಂತಗಳನ್ನು ಬಣಿಸುವ ಸನ್ನಿವೇಶವನ್ನು ಜಕ್ಕೂರಿನ ಬಳಿಯಿರುವ ಸಂಪಿಗನಹಳ್ಳಿಯಲ್ಲಿ ನಿರ್ದೇಶಕರು ಚಿತ್ರೀಕರಿಸಿಕೊಂಡರು.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಶಶಿಕಲಾ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಂಪ್ರಸಾದ್ ಅವರ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವಿದೆ. ವಿ.ಚಂದ್ರಶೇಖರ್ ಛಾಯಾಗ್ರಹಣ, ಡಿ.ಥಾಮಸ್ ಸಂಗೀತ, ಬಸವರಾಜ್ ಸಂಕಲನ, ಅಶೋಕ್ ಸಾಹಸ, ಅನಿಲ್ಕೃಷ್ಣ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಶ್ರವಣಿ, ರೂಪ, ವಿನುಷ, ಬ್ಯಾಂಕ್ಜನಾರ್ಧನ್, ಸಂತೋಷ್ ಉಪ್ಪಿನ್, ರೇಖಾ ವಿ ಕುಮಾರ್, ಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed