`ಲಕ್ಷ್ಮಿ` ವಿದೇಶದಿಂದ ವಾಪಸ್
Posted date: 19 Mon, Sep 2011 ? 03:35:39 PM

ಭರಣಿ ಮಿನರಲ್ಸ್ ಸಂಸ್ಥೆಯ ಶ್ರೀ ಭಾಸ್ಕರ್ ಹಾಗೂ ಆದಿ ಜಂಟಿಯಾಗಿ ತಯಾರಿಸುತ್ತಿರುವ ’ಲಕ್ಷ್ಮಿ’...........ನೋ ಒನ್ ಕೆನ್ ಟಚ್ ಮಿ ನಿರ್ದೇಶಕ ರಾಘವ ಲೋಕಿ ಅವರ ೩ನೇ ಚಿತ್ರ ಬ್ಯಾಂಕಾಕ್ ಹಾಗೂ ಹಾಂಗ್‌ಕಾಂಗ್ ದೇಶಗಳಲ್ಲಿ ಮಾತಿನ ಹಾಗೂ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಇದುವರೆವಿಗೆ ೬೦ ದಿವಸಗಳ ಚಿತ್ರೀಕರಣದಲ್ಲಿ ೯೦% ರಷ್ಟು ಚಿತ್ರೀಕರಣವನ್ನು ಮುಗಿಸಿ ಕೇವಲ ೨ ಹಾಡು ಹಾಗೂ ಪ್ಯಾಚ್ ವರ್ಕ್‌ಗಳ ಕೆಲಸ ಬಾಕಿ ಉಳಿಸಿಕೊಂಡಿದೆ.
ಬ್ಯಾಂಕಾಕ್ ಹಾಗೂ ಹಾಂಗ್‌ಕಾಂಗ್ ಸ್ಥಳಗಳಲ್ಲಿ ೧೫ ದಿವಸಗಳ ಕಾಲ ೨೮ ಸದಸ್ಯರ ಚಿತ್ರತಂಡದ ಅತ್ಯಂತ ಅದ್ಭುತವಾದ ಸನ್ನಿವೇಶಗಳನ್ನು ಹಗಲು ರಾತ್ರಿ ಚಿತ್ರೀಕರಿಸಿಕೊಂಡಿದೆ. ಚಿತ್ರೀಕರಣಕ್ಕಾಗಿ ’ಲೋ ಲೋಡರ್’ ಕ್ಯಾಮರಾ ಉಪಕರಣಗಳನ್ನು ಬಳಸಿ ಕಣ್ಣಿಗೆ ಎಲ್ಲ ದೃಶ್ಯಗಳು ಕಟ್ಟುವಂತೆ ಹಾಗೂ ನೋಡುಗರಿಗೆ ಹೊಸ ಅನುಭವವನ್ನು ನೀಡುವಂತೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಘವ ಲೋಕಿ. ಕೆಲವು ಸಾಹಸ ಸನ್ನಿವೇಶಗಳಿಗೆ ಸಂಯೋಜಕ ರವಿವರ್ಮ ೫ ವಿದೇಶಿ ವ್ಯಕ್ತಿಗಳನ್ನು ಬಳಸಿಕೊಂಡು ಚಿತ್ರೀಕರಿಸಿದ್ದಾರೆ.
ಥ್ರಿಲ್ ಹಾಗೂ ಸ್ಟೈಲ್ ತುಂಬಿರುವ ಈ ’ಲಕ್ಷ್ಮಿ’ ಇನ್ನಷ್ಟು ಪರಿಣಾಮಕಾರಿಯಾಗಿ ದೃಶ್ಯಗಳು ಮೂಡಿಬರಲು ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಹಳಷ್ಟು ಕಡೆ ಅಳವಡಿಸುತ್ತಿದೆ.
ಈ ವರೆಗೆ ಚಿತ್ರೀಕರಣವನ್ನು ರಾಕ್‌ಲೈನ್ ಸ್ಟುಡಿಯೋ, ಕಿರ್ಲೋಸ್ಕರ್ ಹೌಸ್, ಬೆಂಗಳೂರಿನ ರಸ್ತೆಗಳಲ್ಲಿ ಮಾಡಲಾಗಿದೆ. ಒಂದು ಹಾಡಿಗಾಗಿ ನೈನಿತಾಲ್ ಅಥವಾ ಡಾರ್ಜಿಲಿಂಗ್‌ಗೆ ಹೋಗುವ ಸಾಧ್ಯತೆ ಇದೆ.
ತಾರಾಗಣದಲ್ಲಿ ಶಿವರಾಜ್‌ಕುಮಾರ್, ಪ್ರಿಯಾಮಣಿ, ಸಲೋನಿ, ರಂಗಾಯಣ ರಘು, ಆಶಿಶ್ ವಿದ್ಯಾರ್ಥಿ, ರವಿಕಾಳೆ, ಕೋಮಲ್ ಹಾಗೂ ತಮಿಳು ನಟ ವಿನ್ಸಂಟ್ ಇದ್ದಾರೆ.

೬ ಹಾಡುಗಳಿರುವ ’ಲಕ್ಷ್ಮಿ’ ಚಿತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಟ್ಯ್ರಾಕ್ ಹಾಡುಗಳನ್ನು ಸಿದ್ದಪಡಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರು ಕೆ.ಎಸ್. ಚಂದ್ರಶೇಖರ್.

ಲಕ್ಷ್ಮಿ’ ಚಿತ್ರವು ಸದ್ಯಕ್ಕೆ ಸಂಕಲನ ಕಾರ‍್ಯವನ್ನು ಮುತ್ತು ಸ್ಟುಡಿಯೋದಲ್ಲಿ ನಿರ್ವಹಿಸುತ್ತಿದೆ. ನಿರ್ದೇಶಕರ ಪ್ರಕಾರ ನವೆಂಬರ್ ಮಧ್ಯ ಭಾಗದಲ್ಲಿ ’ಲಕ್ಷ್ಮಿ’ ತೆರೆಯ ಮೇಲೆ ರಾರಾಜಿಸಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed