ಅಂದವಾದ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ
Posted date: 06 Wed, Nov 2019 – 09:19:00 AM

ಇತ್ತೀಚಿನ ದಿನಗಳಲ್ಲಿ ಬಹುತೇಕ ಕನ್ನಡ ಚಿತ್ರಗಳು ಪರಭಾಷೆಗಳಿಗೂ ರಿಮೇಕ್ ಆಗಿ ಅಲ್ಲೂ ಸಹ  ಯಶಸ್ಸು ಗಳಿಸುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಇದೀಗ ಅನುಷಾ ರಂಗನಾಥ್ ಹಾಗೂ ಜೈ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಂದವಾದ ಚಿತ್ರವೂ ಸಹ ಸೇರಿಕೊಂಡಿದೆ. ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಿರ್ಮಾಪಕರ ಮುಖದಲ್ಲಿ ಸಂತಸ ಮೂಡಿಸಿದೆ. ಇದರ ಜೊತೆಗೆ ಚಿತ್ರವನ್ನು ತಮಿಳಿಗೆ ಮಾಡಲು ತಮಿಳಿನ ಯಶಸ್ವೀ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ಇದೆಲ್ಲ ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲೆಂದು ಚಿತ್ರತಂಡ ಮೀಡಿಯಾ ಮುಂದೆ ಹಾಜರಾಗಿತ್ತು. ಪರಿಶುದ್ಧ ಪ್ರೀತಿಯ ತಾಜಾ ಕಥೆ ಹಾಗೂ ಮಳೆಯಲ್ಲೇ ನಡೆಯುವ ಘಟನೆಗಳನ್ನೊಳಗೊಂಡ ವಿಭಿನ್ನ ನಿರೂಪಣೆ ಹೊಂದಿರುವ ಅಂದವಾದ ಚಿತ್ರ ತೆರೆಕಂಡು ಕನ್ನಡ ಸಿನಿ ಪ್ರೇPಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮುಂಗಾರು ಮಳೆ ಫ್ಲೇವರ್‌ನಂತಿದ್ದ ಅಂದವಾದ ಸಿನಿಮಾವನ್ನು ಇದೀಗ ತಮಿಳಿಗೆ ರಿಮೇಕ್ ಮಾಡೋಕೆ ನಿರ್ದೇಶಕರೊಬ್ಬರು ಮುಂದಾಗಿzರೆ.

ಈ ಹಿಂದೆ ತಮಿಳಿನಲ್ಲಿ 96 ಎಂಬ ಅಪ್ಪಟ ಪ್ರೇಮಕಥೆಯ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಪ್ರೇಮ್‌ಕುಮಾರ್ ಅವರು ಅಂದವಾದ ಚಿತ್ರದ ಕಥೆಯನ್ನು ಮೆಚ್ಚಿಕೊಂಡಿದ್ದು, ಚಿತ್ರವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮುಂದಾಗಿzರೆ. ಇನ್ನು ನಿರ್ಮಾಪಕ ನಂದಗೋಪಾಲ್ ಕೂಡ ಈ ಸಿನಿಮಾದ ರಿಮೇಕ್ ರೈಟ್ಸ್ ಪಡೆಯಲು ತುದಿಗಾಲಲ್ಲಿ ನಿಂತಿzರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು ಸದ್ಯದ ಈ ಕುರಿತಂತೆ  ಅಧಿಕೃತ ಮಾಹಿತಿ ತಿಳಿಸುತ್ತೇವೆ ಎಂದು ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಚಲ ಅವರು ಹೇಳಿಕೊಂಡರು. ಈ ಚಿತ್ರದಲ್ಲಿ ನಾಯಕನಾಗಿ ನವಪ್ರತಿಭೆ ಜೈ ಕಾಣಿಸಿಕೊಂಡಿದ್ದು, ನಾಯಕಿ ಪಾತ್ರವನ್ನು ಅನುಷಾ ರಂಗನಾಥ್ ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ವಿಕ್ರಮ್ ವರ್ಮನ್ ಅವರ ಸಂಗೀತ, ಹರೀಶ್ ಎನ್. ಸೊಂಡೆಕೊಪ್ಪ ಅವರ  ಕ್ಯಾಮೆರಾ ವರ್ಕ್ ಇದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed