ಅಕ್ಟೋಬರ್ 11 ಕ್ಕೆ `ಎಲ್ಲಿದೆ ಇಲ್ಲಿ ತನಕ` ಬಿಡುಗಡೆ
Posted date: 26 Thu, Sep 2019 – 11:05:36 AM

ಲೋಕೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೃಜನ್ ಲೋಕೇಶ್ ಅವರು ನಿರ್ಮಿಸಿರುವ `ಎಲ್ಲಿದೆ ಇಲ್ಲಿ ತನಕ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಅಕ್ಟೋಬರ್ 11ರಂದು ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ.

ಅರುಣ್ ರಾಮದಾಸ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗಣೇಶ್ ಮಲ್ಲಯ್ಯ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ನಿರ್ದೇಶನ, ಮದನ್ - ಹರಿಣಿ, ಮುರಳಿ, ಕಲೈ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ಕಶ್ಮೀರ ಹಾಗೂ ಮಲೇಶಿಯಾದಲ್ಲಿ ಚಿತ್ರೀಕರಣ ನಡೆದಿದೆ.

ಸೃಜನ್ ಲೋಕೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಹರಿಪ್ರಿಯ. ಗಿರಿಜಾ ಲೋಕೇಶ್, ಸಾಧುಕೋಕಿಲ, ತಾರಾ, ಅವಿನಾಶ್, ತಬಲನಾಣಿ, ಯಶಸ್ ಸೂರ್ಯ, ರಾಧಿಕಾ ರಾವ್, ಗಿರಿ, ಎಂಎಸ್.ಉಮೇಶ್, ಸಿಹಿಕಹಿ ಚಂದ್ರು, ರಂಗ ವಿಶ್ವ ಮುಂತಾದವರು  ‘ಎಲ್ಲಿದೆ ಇಲ್ಲಿ ತನಕ‘ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed