ಅಮೆರಿಕಾದಲ್ಲಿ ರಮೇಶ್ ಅರವಿಂದ್
Posted date: 17 Fri, Jan 2020 – 02:28:58 PM

 ನಟ ರಮೇಶ್ ಅರವಿಂದ್ ಸದ್ಯ ಬಟರ್‌ಫ್ಲೈ, 100, ಶಿವಾಜಿ ಸೂರತ್ಕಲ್, ಬೈರಾದೇವಿ ಹೀಗೆ ಹಲವಾರು ಚಲನಚಿತ್ರಗಳ ಕೆಲಸಗಳಲ್ಲಿ ತುಂಬಾನೇ ಬ್ಯುಸಿಯಾಗಿರೋ ಕಲಾವಿದ. ಅದರ ನಡುವೆಯೂ ಅವರು ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗಾಗಿ ಅದರಲ್ಲೂ ಚಲನಚಿತ್ರರಂಗದಲ್ಲಿ ತೊಡಗಿಕೊಳ್ಳಬೇಕೆಂಬ ಆಸಕ್ತಿಯುಳ್ಳವರಿಗಾಗಿ ಎರಡು ದಿನಗಳ ಕಾಲ ವಿಶೇಷ ತರಬೇತಿ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡಲಿದ್ದಾರೆ.

ನಾರ್ಥ ಕ್ಯಾಲಿಫೋರ್ನಿಯಾದ ಕನ್ನಡ ಕೂಟದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಇದೇ ತಿಂಗಳ ೧೮ರಂದು ಕಾಫಿ, ಇಡ್ಲಿ ಅಂಡ್ ಮೂವೀಸ್ ಎಂಬ ಹೆಸರಿನ ಮಾಸ್ಟರ್ ಕ್ಲಾಸಸ್ ಇನ್ ಫಿಲಂ ಮೇಕಿಂಗ್ ಬೈ ರಮೆಶ್ ಅರವಿಂದ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಒಂದು ಕಥೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು, ಅದರ ಚಿತ್ರಕಥೆಯನ್ನು ಹೇಗೆ ಬರೆಯೋದು, ಆರ್ಟಿಸ್ಟ್‌ನ್ನು ಹೇಗೆ ಸೆಲೆಕ್ಟ್ ಮಾಡೋದು ಮತ್ತು ಅವರಿಂದ ಹೇಗೆ ಆಕ್ಟಿಂಗ್ ತೆಗೆಸೋದು. ಮ್ಯೂಸಿಕ್ ಡೈರೆಕ್ಟರ್ ಜೊತೆ, ಕ್ಯಾಮರಾಮನ್ ಜೊತೆ ಹೇಗೆ ಕೊಲ್ಯಾಬ್ರೇಟ್ ಮಾಡೋದು ಎಂಬುದರ ಬಗ್ಗೆ ಇಲ್ಲಿ ವಿವರಣೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸಕ್ತ ಎನ್‌ಆರ್‌ಐಗಳೆಲ್ಲರೂ ಭಾಗವಹಿಸಲಿದ್ದಾರೆ. ಅದಲ್ಲದೆ ಒಂದು ಸಿನಿಮಾವನ್ನು ಹೇಗೆಲ್ಲ ಮಾರ್ಕೆಟಿಂಗ್ ಮಾಡಬಹುದು ಎನ್ನುವುದರ ಬಗ್ಗೆ ಕೂಡ ರಮೇಶ್ ಅರವಿಂದ್ ಅವರು ಇದರಲ್ಲಿ  ತಿಳಿಸಿಕೊಡಲಿದ್ದಾರೆ.

ಅದಾದ ನಂತರ ದಿ.೧೯ರಂದು ಪ್ರೀತಿಯಿಂದ ರಮೇಶ್ ಎಂಬ ವಿಶೇಷ ಷೋವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಕನ್ನಡ ಚಿತ್ರರಂಗ ಆರಂಭದಿಂದಲೂ  ನಡೆದುಬಂದ ಹಾದಿಯನ್ನು  ಹಾಗೂ ನಟ ರಮೇಶ್ ಅರವಿಂದ್ ಅವರ ಸಿನಿಮಾ ರಂಗದ ಲೈಫ್ ಸ್ಟೋರಿಯನ್ನು ಈ ಷೋನಲ್ಲಿ ನಿರೂಪಿಸಲಾಗುವುದು. ಈ ಕಾರ್ಯಕ್ರಮಕ್ಕಾಗಿ ಬುಧವಾರ ರಾತ್ರಿಯೇ ರಮೇಶ್ ಅರವಿಂದ್ ಅವರು ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed