ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ‘ಗೀತಾ. ಎಸ್.ಎಸ್.ಫ಼ಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಜನಮನಸೂರೆಗೊಂಡ ‘ಮುಗುಳುನಗೆ ಚಿತ್ರ ಇವರ ನಿರ್ಮಾಣದಲ್ಲೇ ಮೂಡಿಬಂದಿತ್ತು.
‘ಮಿಸ್ಟರ್ & ಮಿಸ್ಸಸ್ ರಾಮಾಚಾರಿ ಹಾಗೂ ‘ರಾಜಕುಮಾರ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.
ಜುಲೈ ೨ ಗಣೇಶ್ ಅವರ ಹುಟ್ಟಿದ ದಿನಕ್ಕಾಗಿ ಈ ಚಿತ್ರದ ವಿಶೇಷ ಫ಼ೋಟೊಶೂಟ್ ಕೂಡ ಮಾಡಲಾಗಿದೆ. ಸೆಪ್ಟಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ನಾಯಕಾರಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಹೆಸರಾಂತ ನಟ - ನಟಿಯರ ತಾರಾಬಳಗವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ವಿ.ಹರಿಕೃಷ್ಣ ಅವರು ‘ಗೀತಾಗೆ ಸಂಗೀತ ನೀಡುತ್ತಿದ್ದಾರೆ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ ನಿರ್ದೆಶಕ ವಿಜಯ್ ನಾಗೇಂದ್ರ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದ ಹಾಗೂ ತಂತ್ರಜ಼್ಞರ ಆಯ್ಕೆ ನಡೆಯುತ್ತಿದೆ.