ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಛನದಲ್ಲಿ ಕೆ.ಎ. ಸುರೇಶ್ ಮತ್ತು ಕೆ. ರಾಜೀವ್ ನಿರ್ಮಿಸಿರುವ ೨ನೇ ಮದುವೆ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ನಡೆದು, ಯಶಸ್ವಿಯಾಗಿ ಪೂರ್ಣಗೊಂಡಿದೆ. ನಿದೇಶಕ ದಿನೇಶ್ಬಾಬು ಅವರು ೨ ಯೂನಿಟ್ಗಳ ಮೂಲಕ ೨ ಕ್ಯಾಮೆರಾ ಬಳಸಿ, ಹಗಲು-ರಾತ್ರಿ ಚಿತ್ರೀಕರಣ ನಡೆಸಿ, ಮುಕ್ತಾಯಗೊಳಿಸಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಬಹಳ ದಿನಗಳ ನಂತರ ಅನಂತ್ನಾಗ್-ಸುಹಾಸಿನಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ ಪ್ರೇಮ ಕಥಾಹಂದರವಾಗಿದ್ದು, ಅನಂತ್-ಸುಹಾಸಿನಿಯಂಥ ಪ್ರತಿಭಾವಂತ ಜೋಡಿಯ ಜೊತೆಗೆ ನೆನಪಿರಲಿ ಪ್ರೇಮ್, ಜೆನೀಫರ್ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ-ಚಿತ್ರಕಥೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜಯಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನ ಇದ್ದು, ಶರಣ್, ತಾರಾ, ರಂಗಾಯಣ ರಘು, ಸಿಂಧೂ, ನವ್ಯ ಉಳಿದ ತಾರಾಗಣದಲ್ಲಿದ್ದಾರೆ