ತಮಿಳಿಗೆ ‘ವೀಕ್ ಎಂಡ್‘
Posted date: 05 Wed, Jun 2019 – 09:37:39 AM

 ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿದ್ದ ‘ವೀಕ್ ಎಂಡ್‘ ಚಿತ್ರ ಇತ್ತೀಚೆಗಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ವೀಕ್ಷಿಸಿದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮುಂದಾಗಿದ್ದಾರೆ.
ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶಿಸಿರುವ ಶೃಂಗೇರಿ ಸುರೇಶ್ ಅವರೆ ತಮಿಳಿನಲ್ಲೂ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕರನ್ನು ಬಿಟ್ಟು ಕಲಾವಿದರು ಹಾಗೂ ತಂತ್ರಜ಼್ಞರು ತಮಿಳು ಚಿತ್ರರಂಗದವರೆ ಆಗಿರುತ್ತಾರೆ.
ಅಲ್ಲಿನ ನೆಟಿವಿಟಿಗೆ ತಕ್ಕ ಹಾಗೆ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದಾಗಿ ತಿಳಿಸಿರುವ ನಿರ್ದೇಶಕ ಶೃಂಗೇರಿ ಸುರೇಶ್ ಸದ್ಯದಲ್ಲೇ ಇದಕ್ಕೆ ಸಂಬಂಧಿಸಿದ ಕಾರ್ಯಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed