ಫo್ರೆಂಡ್ಸ್ ಪ್ರೊಡಕ್ಷನ್ಸ್ನಿಂದ ನೂತನ ಚಿತ್ರ
Posted date: 5/January/2009

ಸಾಲುಸಾಲು ಚಿತ್ರಗಳು ನಿರ್ಮಾಣವಾಗುತ್ತಿರುವ ಈ ಸಮಯದಲ್ಲಿ ಶೀರ್ಷಿಕೆಗಳಿಗೆ ಬರಗಾಲವಾರಂಭವಾಗಿದೆ. ಆದ್ದರಿಂದ ಜಾಣ ನಿರ್ಮಾಪಕರು ತಮ್ಮ ನಿರ್ಮಾಣದ ಚಿತ್ರಗಳನ್ನು ಸಂಖ್ಯೆಯಿಂದ ಸೂಚಿಸುತ್ತಾರೆ. ಒಳ್ಳೆ ಶೀರ್ಷಿಕೆ ಸಿಕ್ಕ ಕೂಡಲೆ ಚಿತ್ರಕ್ಕೆ ಅದನ್ನು ಬಳಸಿಕೊಳ್ಳುವುದ್ದನ್ನು ರೂಢಿಸಿಕೊಂಡಿದ್ದಾರೆ.

    ಪ್ರಸ್ತುತ ಫo್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಿಂದ ನೂತನ ಚಿತ್ರವೊಂದು ಆರಂಭವಾಗಿದೆ. ಹೆಸರಿಡಿದ ಈ ಚಿತ್ರದಲ್ಲಿ ಮೋಹಕ ಬೆಡಗಿ ಸುಮನ್‌ರಂಗಾನಾಥ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಫoೆಬ್ರವರಿ ಅಂತ್ಯದ ವೇಳೆಗೆ ಒಂದೇ ಹಂತದಲ್ಲಿ ಚಿತ್ರ ಪೂರ್ಣವಾಗಲಿದೆ. ಇತ್ತೀಚೆಗೆ ರೆಸಿಡೆನ್ಸಿ ರಸ್ತೆಯ ಎನ್.ವೈ.ಕೆ ಡಿಸ್ಕೋ ಕ್ಲಬ್‌ನಲ್ಲಿ ವಿ.ಮನೋಹರ್ ರಚಿಸಿರುವ

ನಿಂದಲ್ಲ ಕಾಲ ನಂದು ಬಾಬಾ ಬೀಬಿ- ಸ್ಯಾರಿ ಲೈಲಾ ಹಿಂದೆ ಬಾ ಹಾ ಬೀಬಿ

ಎಂಬ ಗೀತೆಯನ್ನು ಸುಮನ್‌ರಂಗಾನಾಥ್ ಹಾಗೂ ಸಹನರ್ತಕರ ಅಭಿನಯದಲ್ಲಿ ಚಿತ್ರೀಕರಿಸಿಕೊಂಡರು ನಿರ್ದೇಶಕ ಬಿ.ಶಂಕರ್. ನಿರ್ದೇಶಕರೇ ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಸುಂದರನಾಥ್‌ಸುವರ್ಣ ಛಾಯಾಗ್ರಹಣ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣನಿರ್ವಹಣೆಯಿದೆ. ದಿಗಂತ್, ರೋಹನ್‌ಗೌಡ, ನಿಖಿತ, ಸುಮನ್‌ರಂಗಾನಾಥ್, ಉಮಾಶ್ರೀ, ಹರೀಶ್ ರೈ, ಮೈಕಲ್‌ಮಧು, ರೇಖಾದಾಸ್ ಮುಂತಾದವರ ತಾರಾಬಳಗ ಈ ನೂತನ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed