ಬಿಲ್ ಗೇಟ್ಸ್ ಹಾಡಿಗೆ ಖರ್ಚಾದದ್ದು ನಲವತ್ತು ಲಕ್ಷ!
Posted date: 09 Thu, Aug 2018 – 08:55:59 AM

ಚಿತ್ರೀಕರಣ ಶುರುವಾದ ಘಳಿಗೆಯಿಂದಲೇ ನಾನಾ ಕಾರಣದಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಿಲ್‌ಗೇಟ್ಸ್. ಈ ಚಿತ್ರ ತಂಡವೀಗ ಮತ್ತೆ ಗಾಂಧಿನಗರವೇ ತಿರುಗಿ ನೋಡುವಂತೆ ಸದ್ದು ಮಾಡಿದೆ. ಅದಕ್ಕೆ ಕಾರಣವಾಗಿರುವುದು ಭರ್ತಿ ನಲವತ್ತು ಲಕ್ಷ ಖರ್ಚು ಮಾಡಿ ರೂಪಿಸಿರುವ ವಿಶೇಷವಾದೊಂದು ಹಾಡು!
ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಶ್ರೀನಿವಾಸ್ ಸಿ. ನಿರ್ದೇಶನ ಮಾಡಿದ್ದಾರೆ. ಇದೊಂದು ಮಕ್ಕಳ ಚಿತ್ರ ಎಂಬುದರ ಹೊರತಾಗಿಯೂ ತಾಂತ್ರಿಕವಾಗಿಯೂ ಅದ್ದೂರಿಯಾಗಿರಬೇಕೆಂಬ ಕಾರಣದಿಂದ ಚಿತ್ರ ತಂಡ ವಿಶೇಷವಾದೊಂದು ಹಾಡನ್ನು ರೂಪಿಸಿದೆ. ಈ ಹಾಡಿನಲ್ಲಿ ಬರೀ ಮಕ್ಕಳೇ ನಟಿಸಿದ್ದಾರಂತೆ. ಇದಕ್ಕೆ ಒಟ್ಟಾರೆಯಾಗಿ ಖರ್ಚು ಮಾಡಿರೋ ಮೊತ್ತ ನಲವತ್ತು ಲಕ್ಷ!

ಸಾಮಾನ್ಯವಾಗಿ ಮಕ್ಕಳ ಚಿತ್ರಗಳೆಂದರೆ ಕೈ ಬಿಚ್ಚಿ ಖರ್ಚು ಮಾಡಲು ಹಿಂದೇಟು ಹಾಕಲಾಗುತ್ತದೆ. ಆದರೆ ಔಟ್‌ಪುಟ್ ಚೆನ್ನಾಗಿರಬೇಕೆಂಬ ಕನಸಿನಿಂದ ಯಥೇಚ್ಚವಾಗಿ ಖರ್ಚು ಮಾಡಿ ಈ ಚಿತ್ರವನ್ನು ರೂಪಿಸಲಾಗಿದೆ. ಅದರ ಭಾಗವಾಗಿ ಅಣಿಗೊಂಡಿರೋ ಈ ಹಾಡನ್ನು ಮಂಡ್ಯ, ಮಹದೇವಪುರ, ಸೀತಾಪುರ, ಕೊಳ್ಳೇಗಾಲ ಮುಂತಾದೆಡೆಗಳಲ್ಲಿ ಐದು ದಿನಗಳ ಕಾಲ ಕಲೈ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇವತ್ತು ಎಷ್ಟೋ ಜನಪದ ಆಟಗಳು ಕಣ್ಮರೆಯಾಗಿವೆ. ಕುಂಟಾಬಿಲ್ಲೆ, ಗೋಲಿಯಿಂದ ಹಿಡಿದು ಪ್ರತಿಯೊಂದೂ ಆಟಗಳನ್ನು ನೆನಪಿಸುವ ಆಟಗಳನ್ನೆಲ್ಲಾ ಸೇರಿಸಿ ಪ್ರತಿಯೊಬ್ಬರನ್ನೂ ತಮ್ಮ ಹಿಂದಿನ ನೆನಪುಗಳಿಗೆ ಕೊಂಡೊಯ್ಯುವಂತಾ ಅಪರೂಪದ ಹಾಡು ಇದಾಗಿದ್ದು ಯುವ ಗೀತಸಾಹಿತಿ ಅರುಣ್ ಇದನ್ನು ಬರೆದಿದ್ದಾರೆ. ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣದಲ್ಲಿ ಮನಮೋಹಕವಾಗಿ ಈ ಹಾಡು ಮೂಡಿಬಂದಿದೆ.

ಇನ್ನೇನು ಪೋಸ್ಟ್ ಪ್ರ್ರೊಡಕ್ಷನ್ ಕಾರ್ಯವೆಲ್ಲ ಮುಕ್ತಾಯದ ಹಂತ ತಲುಪಿರುವುದರಿಂದ ಆದಷ್ಟು ಬೇಗನೆ ಈ ಚಿತ್ರ ತೆರೆ ಕಾಣಲಿದೆ. ಜೆ ಮಲ್ಲಿಕಾರ್ಜುನ್ ಅವರ ಸಂಭಾಷಣೆ, ನೋಬಿನ್ ಪಾಲ್ ಅವರ ಸಂಗೀತ, ಮರಿಸ್ವಾಮಿ ಅವರ ಸಂಕಲನ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಕಲೈ ಅವರ ನೃತ್ಯ ನಿರ್ದೇಶನ ಇರುವ ಈ ಚಿತ್ರದಲ್ಲಿ ಶಿಶಿರ್ ಶಾಸ್ತ್ರಿ, ರಶ್ಮಿತಾ, ಅಕ್ಷರಾ ರೆಡ್ಡಿ, ಚಿಕ್ಕಣ್ಣ, ಕುರಿ ಪ್ರತಾಪ್, ಯತಿರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed