ಮದಕರಿಪುರ ಏಪ್ರಿಲ್‌ನಲ್ಲಿ ಬಿಡುಗಡೆ
Posted date: 22 Mon, Feb 2021 02:20:41 PM

ತಾತಾ ಪ್ರೊಡಕ್ಷನ್ಸ್ ೪ನೇ ಕಾಣಿಕೆ ಮದಕರಿಪುರ ಕಿಚ್ಚ ಮಾತಾಡ್ತಾನೆ. ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿರುವ ಈ ಚಿತ್ರವು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳೊಂದಿಗೆ ನಿರ್ಮಿಸಿ, ನಿರ್ದೇಶಿಸಿದ್ದಾರೆ ಪಲ್ಲಕ್ಕಿ. ಛಾಯಾಗ್ರಹಣ-ರಾಜಾಶಿವಶಂಕರ್, ಸಂಗೀತ -ಸ್ಯಾಮ್, ಸಂಕಲನ -ಗೌತಮ್ ಪಲ್ಲಕ್ಕಿ, ಸಾಹಸ- ಡಿಫರೆಂಟ್ ಡ್ಯಾನಿ, ನೃತ್ಯ-ತ್ರಿಭುವನ್, ನಿರ್ವಹಣೆ-ನರಸಿಂಹ ಜಾಲಹಳ್ಳಿ, ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್ ಮಿಸ್ಟ್ರಿ ಕಥೆ ಮತ್ತು ನೈಜ ಘಟನೆಗಳನ್ನು ಆಧರಿಸಿ ಅಪ್ರಕಟಿತ ಕಾದಂಬರಿ ನಾಟಕ ಗಿಡ್ಡೋಬಾ ಮಾತಾಡ್ತಾನೆ ಆಧರಿಸಿ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ, ಬೆಂಗಳೂರು ಸುತ್ತಮುತ್ತ-ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಮತ್ತು ಕೈವಾರ ತಾತಯ್ಯ ಸ್ಟುಡಿಯೋವಿನಲ್ಲಿ ನಡೆದಿದೆ. ತಾರಾಗಣದಲ್ಲಿ - ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್ ಅರಸ್, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈಋತ್ಯ, ಸೀನೂ ಮಾರ್ಕಾಳಿ, ವಿನಯ್ ಬಲರಾಮ್, ಅರ‍್ಗವಿ ರಾಯ್, ರೆಡ್ಡಿ ಹಿರಿಯೂರ್, ಸವಿತಾ ಚಿನ್ಮಯಿ, ವೆಂಕಟಾಚಲ, ಹಾಗೂ ಪಲ್ಲಕ್ಕಿ ಫಿಲಂ ಇನ್ಟಿಟ್ಯೂಟ್ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.
or

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed