ಮಾರ್ಚ್ 29 ರಂದು ‘ತ್ರಯಂಬಕಂ’ ಚಿತ್ರ ತೆರೆಗೆ
Posted date: 07 Thu, Mar 2019 – 04:20:53 PM

ಫ಼್ಯೂಚರ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ‘ತ್ರಯಂಬಕಂ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾರ್ಚ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ  ರಾಜಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ.ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಕನಸಿನ ಕವನ ರಚಿಸಿದ್ದಾರೆ. ಸಂಭಾಷಣೆಯನ್ನು ನವೀನ್‌ಕೃಷ್ಣ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed