ಅಮೊಘ್ ಎಂಟರ್ ಪ್ರೈಸಸ್ ಲಾಂಛನದ ಅಡಿಯಲ್ಲಿ, ರಾಜ್ ಸೂರ್ಯನ್ ,ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ, ಸಂಚಾರಿ, ಜಟಾಯು ಖ್ಯಾತಿಯ ಆಕ್ಷನ್ ಸ್ಟಾರ್ `ರಾಜ್ ಸೂರ್ಯನ`ನಾಯಕನಾಗಿ ಮೂರು ವಿಭಿನ್ನ ಔಟ್ಲುಕ್ ನಲ್ಲಿ ಕಾಣಿಸಿಕೊಂಡಿರುವ ‘ಮೈ ನೇಮ್ ಈಸ್ ರಾಜ್’ ಒಂದು ಹಾಡಿನೊಂದಿಗೆ ಚಿತ್ರೀಕರಣ ಪೂರ್ತಿಗೊಳಿಸಿದೆ.
ಅಲ್ಟ್ರಾ ಮಾಡರ್ನ್ ಗ್ಲಾಮರ್ ಬೆಡಗಿಯರಾದ ಆಕರ್ಷಿಕ ಮತ್ತು ನಸ್ರೀನ್ ನಾಯಕಿಯರಾಗಿ ನಟಿಸಿದ್ದು, ಪ್ರಭು ಸೂರ್ಯ , ನೇಪಾಳದ ಆಯುಶ್ರೀ , ಇರಾನ್ ದೇಶದ ಸೂಪರ್ ಮಾಡೆಲ್ ಏವಾ ಸಫಾಯಿ ನಟಿಸಿರುವ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ ಮೈ ನೇಮ್ ಈಸ್ ರಾಜಾ ತೆಲುಗಿನಲ್ಲಿ " ನಾ ಪೇರು ರಾಜಾ " ಎಂದು ನಾಮಕರಣ ಮಾಡಲಾಗಿದೆ.
ಕರ್ನಾಟಕ, ಕೇರಳ, ಮತ್ತು ಆಂದ್ರ-ತೆಲಂಗಾಣ ರಾಜ್ಯಗಳ ಬಹಳಷ್ಟು ಸ್ಥಳಗಳಲ್ಲಿ ೬೫ ದಿನಗಳ ಶೂಟಿಂಗ್ ಮುಗಿಸಿ, ಕೊನೆಯದಾಗಿ ತೆಲುಗಿನ ಲಿರಿಕ್ ರೈಟರ್ ಸಾಹಿತಿ ಹಾಗು ಕನ್ನಡದ ಅನಿಲ್ (ದಿಲ್ವಾಲ) ಬರೆದಿರುವ ಹಾಟ್ ಟೈಟಲ್ ಸಾಂಗ್ `ರಾಜಾ ರಾಜಾ ಮನ್ಮತ ರಾಜಾ ಆಜಾ ಆಜಾ ನಾ ರಾಜಾ ` ಎಂಬ ಹಾಡಿಗೆ ಕೊರಿಯೊಗ್ರಾಫರ್ ನಾಗೇಶ್ ಹಾಲಿವುಡ್ ಆಲ್ಬಮ್ ಸಾಂಗ್ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ , ಬಾಹುಬಲಿ ಚಿತ್ರದ ಗಾಯಕಿ ಮೋಹನ ಭೋಗರಾಜು ಹಾಡಿರುವ ಈ ಹಾಡಿಗೆ ನಿರ್ಮಾಪಕರಾದ ರಾಜ್ ಸೂರ್ಯನ್, ಪ್ರಭಾಕರ್ ರೆಡ್ಡಿ ,ಕಿರಣ್ ರೆಡ್ಡಿ ಬಜೆಟ್ ಲೆಕ್ಕಿಸದೆ ಕನ್ಟೆಂಟ್ ಮೇಲಿನ ಭರವಸೆಯಿಂದ ಬಾರಿ ಬಜೆಟ್ ನ ಅದ್ದೂರಿ ಸೆಟ್ ವೊದಗಿಸಿದ್ದು ಭರ್ಜರಿಯಾಗಿ ಹಾಡಿನ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವುದಾಗಿ ಚಿತ್ರದ ನಿರ್ದೇಶಕ ಅಶ್ವಿನ್ ಕೃಷ್ಣ ತಿಳಿಸಿದ್ದಾರೆ.
ಅಕ್ಟೋಬರ್ ನಲ್ಲಿ ಆಡಿಯೋ ಲಾಂಚ್ ಮತ್ತು ನವೆಂಬರ್ನಲ್ಲಿ ಈ ಚಿತ್ರವು ಕರ್ನಾಟಕ, ಆಂಧ್ರ-ತೆಲಂಗಾಣ ದಲ್ಲಿ ಏಕ ಕಾಲದಲ್ಲಿ ಭರ್ಜರಿ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕರಾದ ರಾಜ್ ಸೂರಿಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ತಿಳಿಸಿದ್ದಾರೆ .
ಎಲ್ವಿನ್ ಜೊಶ್ವಾ “ಮೈ ನೇಮ್ ಈಸ್ ರಾಜಾ “ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ "ಮೈ ನೇಮ್ ಈಸ್ ರಾಜಾ" " ಚಿತ್ರದ ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್ , ಕವಿರಾಜ್ ಮತ್ತು ಅನಿಲ್ (ದಿಲ್ವಾಲ) ಬರೆದಿದ್ದಾರೆ.