ಮೈಸೂರಿನಲ್ಲಿ ಚಿಲಮ್
Posted date: 13 Wed, Jun 2018 – 08:34:44 AM

ಎಂ.ಜಿ. ಎಂಟರ್‌ಟೈನ್‌ಮೆಂಟ್ ಲಾಂಛನದಡಿಯಲ್ಲಿ ಎಂ.ಗೋಪಾಲ್ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ "ಚಿಲಮ್" ಚಿತ್ರದ ಚಿತ್ರೀಕರಣವು ಇದೇ 11 ರಿಂದ ಮೈಸೂರಿನಲ್ಲಿ ಮುಂದುವರೆದಿದೆ.

ಹತ್ತು ದಿವಸಗಳ ಕಾಲ ನಡೆಯುವ ಚಿತ್ರದ ಚಿತ್ರೀಕರಣದಲ್ಲಿ ಮನೋರಂಜನ್ ರಾಘವೇಂದ್ರ ರಾಜ್‌ಕುಮಾರ್, ಸರಿತಾ ಭಾಗವಹಿಸುವ ಹಲವಾರು ಸನ್ನಿವೇಶಗಳನ್ನು ನಿರ್ದೇಶಕ ಚಂದ್ರಕಲ ಚಿತ್ರಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ನವೀನ್‌ಕುಮಾರ್ ಛಾಯಾಗ್ರಹಣ, ನಾಬಿನ್ ಪೌಲ್ ಸಂಗೀತ, ಹರೀಶ್‌ಕೊಮ್ಮೆ ಸಂಕಲನ, ರವಿವರ್ಮ, ವಿಕ್ರಂ, ಸಾಹಸ, ಮುರಲಿ ರವಿಕಿಶನ್, ನೃತ್ಯ, ರಾಜ್‌ಬನ್ನೂರು ನಿರ್ದೇಶನ ಸಹಕಾರವಿದ್ದು, ಕಥೆ, ಚಿತ್ರಕಥೆ ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನುಜೆ. ಚಂದ್ರಕಲ ಹೊತ್ತಿದ್ದಾರೆ.

ತಾರಾಗಣದಲ್ಲಿ ಮನೋರಂಜನ್, ಪ್ರಿಯಾಂಕತಿಮ್ಮಯ್ಯ, ದೇವರಾಜ್, ರಾಘವೇಂದ್ರರಾಜ್‌ಕುಮಾರ್, ನಾನಾ ಪಾಟೇಕರ್, ಸರಿತಾ, ಶೋಭರಾಜ್, ಮನ್‌ದೀಪ್‌ರಾಯ್, ಭರತ್, ರಾಘವ್‌ನಾಗ್, ದಿವಾಕರ್ (ಬಿಗ್‌ಬಾಸ್‌ಖ್ಯಾತಿ) ಸಂದೀಪ್ ಮುಂತಾದವರಿದ್ದಾರೆ.    

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed