ಮೊದಲ ಹಂತದ ಚಿತ್ರೀಕರಣ ಮುಗಿಸಿದ ಟಕ್ಕರ್
Posted date: 08 Wed, Aug 2018 – 11:49:00 AM

ಹುಲಿರಾಯ ಸಿನಿಮಾದ ನಂತರ ನಾಗೇಶ್ ಕೋಗಿಲು ನಿರ್ಮಾಣದಲ್ಲಿ ಎಸ್.ಎಲ್.ಎನ್ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಎರಡನೇ ಚಿತ್ರ ಟಕ್ಕರ್. ಅಂಬರೀಶ ಮತ್ತು ಚಕ್ರವರ್ತಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ, ದರ್ಶನ್ ಅವರ ಕುಟುಂಬದ ಪ್ರತಿಭೆ ಮನೋಜ್ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಟಕ್ಕರ್. ಪುಟ್ಟಗೌರಿ ಮದುವೆ ಎನ್ನುವ ಕಿರುತೆರೆ ಧಾರಾವಾಹಿನ ಮೂಲಕ ಕರ್ನಾಟಕದ ಮನೆಮಗಳಾಗಿರುವ ಹುಡುಗಿ ರಂಜನಿ ರಾಘವನ್ ಈ ಚಿತ್ರದ ನಾಯಕಿ.

ಮೈಸೂರಿನಲ್ಲಿ ಸತತ ಇಪ್ಪತ್ತೆಂಟು ದಿನಗಳ ಕಾಲ ಚಿತ್ರದ ಮಾತಿನ ಭಾಗದ ಚಿತ್ತೀಕರಣ ನಡೆಸಲಾಗಿದೆ. ಮೈಸೂರಿನ ಯುವರಾಜ ಕಾಲೇಜು, ಯೂನಿವರ್ಸಿಟಿ, ಅರಸು ಕ್ಲಬ್, ಎನ್.ಜೆ.ಎಸ್ ಆಸ್ಪತ್ರೆ, ಸಪ್ತ ಮಾತೃಕೆಯರ ದೇವಸ್ಥಾನ ಮತ್ತು ಹೈವೇ ಸರ್ಕಲ್ ಮನೆಯಲ್ಲಿ ಚಿತ್ರೀಕರಣೆ ನಡೆದಿದೆ. ಇನ್ನು ಸಾಹಸದೃಶ್ಯಗಳು ಬೆಂಗಳೂರಿನ

ಕೆಂಗೇರಿ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆಸಲಾಗಿದ್ದು, ಕಂಠೀರವ ಸ್ಟುಡಿಯೋ, ಹೆಚ್.ಎಂ.ಟಿ. ಮತ್ತು ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

ಕೆ.ಎಂ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ವಿಲಿಯಮ್ ಜಾನ್ ಡೇವಿಡ್ ಛಾಯಾಗ್ರಹಣವಿರುವ ಟಕ್ಕರ್ ಸಿನಿಮಾದಲ್ಲಿ ಹಿರಿಯ ನಟಿ ಸುಮಿತ್ರಾ, ಸಾಧು ಕೋಕಿಲಾ, ಭಜರಂಗಿ ಲೋಕಿ, ಈಟಿವಿ ಶ್ರೀಧರ್, ಮಾ. ಹಿತೈಷ್ ಗೌಡ, ಮಾ. ನಿಹಾಲ್ ಸಾಗರ್, ಕಾಮಿಡಿ ಕಿಲಾಡಿ ನಯನ, ಕುರಿ ಸುನಿಲ್, ಪ್ರವೀಣ್, ರಜನಿಕಾಂತ್ ಮುಂತಾದವರ ತಾರಾಗಣವಿದೆ. ರಘು ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed