ರಮೇಶ್ ಕಷ್ಯಪ್-ಅಜಯ್‌ಕುಮಾರ್ ಥ್ರಿಲ್ಲರ್‌ಮಂಜುಗೆ ಗೌರವ ಡಾಕ್ಟರೇಟ್
Posted date: 26 Tue, Nov 2019 – 02:01:02 PM

ಇತ್ತೀಚೆಗಷ್ಟೆ ಕ್ರೇಜಿಸ್ಟಾರ್ ರವಿಚಂದ್ರನ್‌ಅವರಿಗೆ ಬೆಂಗಳೂರಿನ ಸಿಎಮ್‌ಆರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.ಅದರ ಬೆನ್ನ ಈಗ ಕನ್ನಡ ಚಿತ್ರರಂಗದಮೂವರು ಸಾಧಕರಿಗೆ ಪ್ರತಿಷ್ಠಿತಸಂಸ್ಥೆಯೊಂದು ಗೌರವ ಡಾಕ್ಟರೇಟ್‌ಪದವಿ ನೀಡಿ ಗೌರವಿಸಿದೆ. ನಿರ್ಮಾಪಕ ರಮೇಶ್‌ಕಶ್ಯಪ್, ಕಥೆಗಾರ, ಸಂಭಾಷಣೆಗಾರ ಹಾಗೂ ನಿರ್ದೇಶಕ ಅಜಯ್‌ಕುಮಾರ್. ಸಾಹಸ ನಿರ್ದೇಶಕ, ನಟ ಥ್ರಿಲ್ಲರ್ ಮಂಜು ಇವರಜೀವಮಾನದ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನುನೀಡಲಾಗಿದೆ.  ಕನ್ನಡ ಚಿತ್ರರಂಗದಲ್ಲಿಗೌರವ ಡಾಕ್ಟರೇಟ್ ಪದವಿ ಪಡೆದವರಲ್ಲಿವರನಟ ಡಾ.ರಾಜ್‌ಕುಮಾರ್  ಮೊದಲಿಗರು. ಆನಂತರ ಶಿವರಾಜ್‌ಕುಮಾರ್, ರವಿಚಂದ್ರನ್‌ಸೇರಿ ಅನೇಕ ಕಲಾವಿದರು ಮತ್ತುತಂತ್ರಜ್ಞರಿzರೆ.

ನ್ಯಾಷನಲ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್ ಸಂಸ್ಥೆಯುಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದಇವರನ್ನು ಗುರ್ತಿಸಿ ಈ ಸಾಧಕರಿಗೆ ಗೌರವಡಾಕ್ಟರೇಟ್ ದಯಪಾಲಿಸಿದೆ. ಚಿತ್ರರಂಗದಲ್ಲಿಸುಮಾರು ೨೫ ವರ್ಷಗಳಿಂದಲೂನಿರ್ಮಾಪಕರಾಗಿ ಅನೇಕ ಸದಭಿರುಚಿಯಚಲನಚಿತ್ರಗಳನ್ನು ನಿರ್ಮಿಸಿ ಯಶಸ್ವಿನಿರ್ಮಾಪಕ ಎನಿಸಿಕೊಂಡಿರುವ ರಮೇಶ್‌ಕಶ್ಯಪ್, ೩೦-೩೫ ವರ್ಷಗಳಿಂದ ನಟ, ಬರಹಗಾರಹಾಗೂ ನಿರ್ದೇಶಕನಾಗಿ ನೂರಾರು ಯಶಸ್ವೀ ಚಲನಚಿತ್ರಗಳಿಗೆ ಕೆಲಸ ಮಾಡಿರುವಅಜಯ್‌ಕುಮಾರ್ ಅಲ್ಲದೆ ಸುಮಾರು ೩೦ ವರ್ಷಗಳಿಂದಲೂ ಸಾಹಸ ನಿರ್ದೇಶಕ, ನಿರ್ದೇಶಕ ಹಾಗೂ ನಟನಾಗಿಯೂ ಕನ್ನಡಸೇರಿದಂತೆ ತಮಿಳು ಮತ್ತು ತೆಲುಗುಚಿತ್ರರಂಗದಲ್ಲೂ ಸೇವೆ ಸಲ್ಲಿಸಿರುವ ಥ್ರಿಲ್ಲರ್‌ಮಂಜು, ಈ ಮೂವರ ಗಣನೀಯಸಾಧನೆಯನ್ನು ಗುರುತಿಸಿದ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿದೆ. ಥ್ರಿಲ್ಲರ್ ಮಂಜುತಮಿಳು, ತೆಲುಗು ಸೇರಿದಂತೆಸರಿಸುಮಾರು ೬೫೦ಕ್ಕೂ ಹೆಚ್ಚುಚಲನಚಿತ್ರಗಳಿಗೆ ಸಾಹಸ ಸಂಯೋಜನೆಮಾಡಿzರೆ. ಇವರ ನಿರ್ದೇಶನದಲ್ಲಿ ಬಂದಿದ್ದಪೋಲೀಸ್ ಸ್ಟೋರಿ, ಜಾಕಿ ಚಾನ್ ಸೇರಿದಂತೆಹಲವಾರು ಚಿತ್ರಗಳು ಯಶಸ್ವೀ ಪ್ರದರ್ಶನ ಕಂಡಿದ್ದವು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed