ರಾಣಿ ಮಹಾರಾಣಿ-೨
Posted date: 4/February/2010

ಸ್ತೂರಿವಾಹಿನಿಯು ತನ್ನ ವಿಭಿನ್ನ ಕಾರ್ಯಕ್ರಮಗಳಿಂದ ಕನ್ನಡಿಗರ ಮನೆ ಮನದಲ್ಲೂ ಅತೀ ಕಡಿಮೆ ಅವಧಿಯಲ್ಲಿ ತನ್ನ ಛಾಪನ್ನು ಮೂಡಿಸಿದೆ.  ಎಲ್ಲರೂ ಮೆಚ್ಚುವಂತಹ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಸತತವಾಗಿ ನೀಡುತ್ತಾ ಬಂದಿರುವುದು ವಾಹಿನಿಯ ಹೆಗ್ಗಳಿಕೆ. ಇಲ್ಲಿನ ವಾತಾವರಣಕ್ಕೆ ಸರಿಹೊಂದುವಂತಹ ನಮ್ಮ ಸಂಸ್ಕೃತಿಗೆ ,ನಮ್ಮ ಬದುಕಿಗೆ ಒಗ್ಗುವಂತಹ ಅನೇಕ ವಿಧದ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ, ಮಹಿಳೆಯರಿಗಾಗಿ ಎಲ್ಲಾ ವಯೋಮಾನದವರಿಗೆ ಕೊಟ್ಟಿರುವ ವಾಹಿನಿಯು ಮುಖ್ಯವಾಗಿ ಮಹಿಳೆಯರಿಗಾಗಿಯೇ ರಾಣಿ ಮಹಾರಾಣಿ ಎನ್ನುವ ಒಂದು ವಿಭಿನ್ನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ತನ್ನ ಮೊದಲನೆಯ ಹಂತದಲ್ಲಿ ಸುಮಾರು ೧೨೫ ಕಂತುಗಳನ್ನು ಪ್ರಸಾರ ಮಾಡಿದ್ದು, ಇದರಲ್ಲಿ ಚಿತ್ರರಂಗದ ಅನೇಕರು ವಿಶೇಷ ಅತಿಥಿಗಳು ಭಾಗವಹಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ. ಈ ಯಶಸ್ವಿ ಕಾರ್ಯಕ್ರಮವನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ಹೊಸ ಪರಿಕಲ್ಪನೆಯೊಂದಿಗೆ ಮತ್ತೊಮ್ಮೆ ರಾಣಿ ಮಹಾರಾಣಿ-೨ ಎನ್ನುವ ಹೆಸರಿನಿಂದ ಈ ತಿಂಗಳ ೧ ರಿಂದ ಪ್ರತಿ ಸೋಮವಾರದಿಂದ ಬುಧವಾರ ದವರೆಗೆ  ರಾತ್ರಿ ೯ ರಿಂದ ೧೦ ಗಂಟೆಯವರೆಗೆ ನಿಮ್ಮ ಮನೆ ಮನೆಗಳಲ್ಲಿ ಮತ್ತೊಮ್ಮೆ ನಮ್ಮ ಮಹಿಳಾ ಮಣಿಗಳು ಮಿಂಚಲಿದ್ದಾರೆ.

ರಾಣಿ ಮಹಾರಾಣಿಯಲ್ಲಿದ್ದಂತೆ ಆರು ಸ್ಪರ್ಧಿಗಳಿಗೆ ಬದಲಾಗಿ ಈ ಸಲದ ನಮ್ಮ ರಾಣಿ ಮಹಾರಾಣಿ-೨ರಲ್ಲಿ ನಾಲ್ಕು ಸ್ಪರ್ಧಿಗಳಿದ್ದು,  ಅನೇಕ ವಿಭಿನ್ನ ಆಟಗಳ ಜೊತೆಗೆ ತಮ್ಮ ಅದೃಷ್ಟ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವುದರ ಮುಖಾಂತರ ವೀಕ್ಷಕರಿಗೆ ಎಂದಿನಂತೆ ಮನರಂಜನೆಯನ್ನು ಒದಗಿಸಲಿದ್ದಾರೆ. ಇದರಲ್ಲಿ ನಾಲ್ಕು ಸುತ್ತುಗಳಿದ್ದು ಆ ಸುತ್ತುಗಳು ಕೆಳಗಿನಂತಿವೆ.

   ೧. ಈ ಟಚ್ಚಲಿ:- ಇಲ್ಲಿ ಕಂಪ್ಯೂಟರಿನ ಸ್ಕ್ರೀನ್ ನನ್ನು ಮುಟ್ಟುತ್ತಾರೆ. ಅಲ್ಲಿರುವ ಆರು ನಂಬರಿನಲ್ಲಿ ಅವರಿಗಿಷ್ಟವಾದ ಮುಟ್ಟಿದ ನಂಬರಿಗನುಗುಣವಾಗಿ ಅಲ್ಲಿರುವ ಮಾದರಿಯಲ್ಲಿನ ಪ್ರಶ್ನೆಗಳನ್ನು ಇವರಿಗೆ ಕೇಳಲಾಗುತ್ತದೆ. ಇದರಲ್ಲಿ ಎರಡು ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಯ ಸರಿಯುತ್ತರಕ್ಕೆ ತಲಾ ೧೦ ಅಂಕಗಳನ್ನು ನೀಡಲಾಗುತ್ತದೆ.
   ೨. ಖೇಲ್ ಖಜಾನೆ:- ಇದರಲ್ಲಿ ೯ ನಂಬರ್ ಗಳನ್ನೊಳಗೊಂಡ ಒಂದು ಬಾಕ್ಸ್ ಇದ್ದು, ಸ್ಪರ್ಧಿಯು ಆ ಬಾಕ್ಸ್ ನಿಂದ ೩೦ ಸೆಕೆಂಡ್ ಗಳ ಒಳಗೆ ನಾಲ್ಕು ನಂಬರ್ ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ಹೀಗೆ ಆರಿಸಿದ ನಾಲ್ಕು ನಂಬರ್ ಗಳಲ್ಲಿ ಮೊದಲ ೩ ನಂಬರ್ ಗಳಲ್ಲಿರುವ ಬಹುಮಾನದ ಬದಲು ಕೊನೆಯ ನಂಬರ್ ನಲ್ಲಿರುವ ಬಹುಮಾನ ಸ್ಪರ್ಧಿಯದ್ದಾಗುತ್ತದೆ.
   ೩. ಆಕ್ಷನ್ ಹಂಗಾಮ (ಬಿಡ್ಡ್ ಮಾಡುವುದು):- ಇದರಲ್ಲಿ ಕಡಿಮೆ ಮೊತ್ತದ ಬಹುಮಾನವಿರುವವರು ಅತೀ ಹೆಚ್ಚು ಮೊತ್ತದ ಬಹುಮಾನವಿರುವವರಿಗೆ ಪ್ರಶ್ನೆಯನ್ನು ಕೇಳುವ ಮುಖಾಂತರ ತಮ್ಮಲ್ಲಿರುವ ಬಹುಮಾನವನ್ನು ಗೆದ್ದುಕೊಳ್ಳುವಂತೆ ಆಹ್ವಾನ ನೀಡುತ್ತಾರೆ. ಇವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು ಇವರಲ್ಲಿರುವ ಬಹುಮಾನವನ್ನು ಗೆಲ್ಲುಬಹುದು. ತಪ್ಪು ಉತ್ತರ ಕೊಟ್ಟರೆ ತಮ್ಮಲ್ಲಿರುವ ಬಹುಮಾನವನ್ನು ಪ್ರಶ್ನೆ ಕೇಳಿದವರಿಗೆ ಕೊಡಬೇಕಾಗುತ್ತದೆ.
   ೪. ಡೇಂಜರ್ ಡೈಸ್:- ಇದೊಂದು ಹಾವು ಏಣಿ ಆಟ. ಸ್ಪರ್ಧಿಗಳು ತಮ್ಮ ಆತ್ಮೀಯರೊಬ್ಬರಿಂದ ನಾಲ್ಕು ಸಲ ಡೈಸ್ ಹಾಕಿಸಿ ಅದರಲ್ಲಿರುವ ನಂಬರಿನಂತೆ ಹಾವು ಏಣಿ ಆಟದಂತೆ ತಾವು ನಡೆಯುವುದು. ಇದೇ ರೀತಿ ಎಲ್ಲಾ ನಾಲ್ಕು ಸ್ಪರ್ಧಿಗಳೂ ಪಾಲ್ಗೊಂಡು ಕೊನೆಯಲ್ಲಿ ಸ್ಪರ್ಧಿಗಳು ಈ ಆಟದಲ್ಲಿ ಎಲ್ಲಿರುತ್ತಾರೊ ಅಲ್ಲಿರುವ ಅಂಕಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುತ್ತಾರೆ.

      ಈ ನಾಲ್ಕೂ ಸುತ್ತುಗಳಲ್ಲಿ  ಗಳಿಸಿರುವ ಅಂಕಗಳ ಆಧಾರದ ಮೇಲೆ ಯಾರು ಹೆಚ್ಚಿನ ಅಂಕಗಳನ್ನು ಗಳಿಸಿರುತ್ತಾರೊ ಅವರಾಗುತ್ತಾರೆ ಅಂದಿನ ಮಹಾರಾಣಿಯ ಪಟ್ಟದ ಜೊತೆಗೆ ಆಕರ್ಷಕ ಕಿರೀಟವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

      ಈ ಸಲದ ರಾಣಿ ಮಹಾರಾಣಿ ಸ್ಪರ್ಧೆಯಲ್ಲಿ ತುಂಬಾ ಆಕರ್ಷಕವಾದ ಬಹುಮಾನಗಳನ್ನು ನೀಡುತ್ತಿದ್ದು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

      ಈ ಕಾರ್ಯಕ್ರಮದ  ತಂಡ ಇಂತಿದೆ.

      ಮುಖ್ಯ ಕಾರ್ಯಕ್ರಮ ನಿರ್ಮಾಪಕರು:-ಶ್ರೀಕಾಂತ್ ಪ್ರಸಾದ್.

      ನಿರ್ದೇಶನ:- ಭುವನ್ ಶಾಸ್ತ್ರಿ.

      ಸಹ ನಿರ್ದೇಶನ:- ಆರ್ದಶ್.

      ನಿರೂಪಣೆ:- ಕುಮಾರಿ ಅಮೃತಾ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed