ಲೆಟ್ಸ್ ಬ್ರೇಕಪ್ನಲ್ಲಿ ಸ್ಪಂದನ
Posted date: 07 Fri, Feb 2020 – 08:26:43 AM

`ಪಂಚತಂತ್` ಖ್ಯಾತಿಯ ವಿಹಾನ್ ನಾಯಕನಾಗಿ ನಟಿಸುತ್ತಿರುವ `ಲೆಟ್ಸ್ ಬ್ರೇಕಪ್` ಚಿತ್ರದ ನಾಯಕಿಯಾಗಿ ಬೆಂಗಳೂರಿನ ಸ್ಪಂದನ ಆಯ್ಕೆಯಾಗಿದ್ದಾರೆ. ಈ ಹಿಂದೆ ಈ ಚಿತ್ರದಲ್ಲಿ ಶ್ರೀಲೀಲ ನಾಯಕಿಯಾಗಿ ನಟಿಸುತ್ತಾರೆಂಬ ಸುದ್ದಿ ನೀಡಲಾಗಿತ್ತು. ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಸ್ಪಂದನ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮಲ್‌ನಲ್ಲಿ ವ್ಯಾಸಂಗ ಮಾಡಿರುವ ಸ್ಪಂದನ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆ ಹಾಗೂ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ತರಭೇತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ನಾಯಕ ಹಾಗು ನಾಯಕಿ ಇಬ್ಬರೂ ಎಂ.ಬಿ.ಎ ವಿದ್ಯಾರ್ಥಿಗಳಾಗಿ ಕಾಣಸಿಕೊಳ್ಳುತ್ತಿದ್ದಾರೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸ್ವರೂಪ್ ನಿರ್ದೇಶಿಸುತ್ತಿದ್ದಾರೆ.  ಈ ಹಿಂದೆ ಸ್ವರೂಪ್ ನಿರ್ದೇಶಿಸಿದ್ದ ‘ಲಖನೌ ಟು ಬೆಂಗಳೂರು‘ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಇದು ಅವರ ನಿರ್ದೇಶನದ ಎರಡನೇ ಚಿತ್ರ. ಪಕ್ಕ ರೊಮೆಂಟಿಕ್ ಲವ್ ಸ್ಟೋರಿಯ  ‘ಲೆಟ್ಸ್ ಬ್ರೇಕಪ್‘ ಚಿತ್ರಕ್ಕೆ ಫ಼ಾರ್ ಎವರ್ ಎಂಬ ಅಡಿಬರಹವಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡಲಿದ್ದಾರೆ. ಮೂರು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ೯೦ರಷ್ಟು ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದರೆ, ೧೦ರಷ್ಟು ಭಾಗದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ. ಉಳಿದ ತಾರಾಬಳಗ ಹಾಗೂ ತಂತ್ರಜ಼್ಞರ ಆಯ್ಕೆ ನಡೆಯುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed