ವಿಜಯ ರಾಘವೇಂದ್ರ ʻಮಾಲ್ಗುಡಿ ಡೇಸ್‌ʼ ಚಿತ್ರ ಕ್ಕೆ 22 ಕೆಜಿ ಕೆತೂಕ ಇಳಿಸಲು ಹೊರಟಿದ್ದಾರೆ.
Posted date: 05 Wed, Jun 2019 – 07:27:18 PM

ʻಮಾಲ್ಗುಡಿ ಡೇಸ್‌ʼ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ. ವಿಜಯ ರಾಘವೇಂದ್ರ ನಟಿಸುತ್ತಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಮೊದಲಿನಿಂದಲೂ ಗುಟ್ಟುಬಿಟ್ಟುಕೊಡದೆಯೂ ಆಗಾಗ ಸದ್ದು ಮಾಡುವಲ್ಲಿ ಸೋತಿಲ್ಲ. ಚಿತ್ರತಂಡ ಈಗ ಹೊಸದೊಂದು ಸುದ್ದಿ ಹೊರ ಬಿಟ್ಟಿದೆ. ಅದೇನೆಂದರೆ, ಒಂದು ವಿಶೇಷ ಪಾತ್ರಕ್ಕಾಗಿ ವಿಜಯ ರಾಘವೇಂದ್ರ, ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ. ಚಿತ್ರದ ನಾಯಕನಟ ವಿಜಯ ರಾಘವೇಂದ್ರ, “ ʻಮಾಲ್ಗುಡಿ ಡೇಸ್ʼ ನನ್ನ ಸಿನಿಬದುಕಿನಲ್ಲಿ ಒಂದು ವಿಶೇಷ ಪ್ರಯತ್ನ. ಇಷ್ಟು ವರ್ಷ ನಾನು ನಿರ್ವಹಿಸಿರುವ ಪಾತ್ರಗಳಲ್ಲಿ ಬಹಳ ಅಪರೂಪದ ಪಾತ್ರ ಇದು.

ಈ ಸಿನಿಮಾ ಗೆಲುವು ತಂದುಕೊಡುವ ವಿಶ್ವಾಸವಿದೆ. ಅಷ್ಟೇ ಅಲ್ಲದೆ ಸಿನಿಮಾದ ಕತೆ, ಚಿತ್ರಕತೆ ನಿಜವಾಗಿಯೂ ಭಿನ್ನವಾಗಿದೆ. ಹಾಗಾಗಿ ಈ ಸಿನಿಮಾಗೋಸ್ಕರ ಅರ್ಧ ವರ್ಷದಿಂದ ಬೇರೆ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದೆ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ” ಎಂದು ʻಮಾಲ್ಗುಡಿ ಡೇಸ್‌ʼ ಬಗ್ಗೆ ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಪಾತ್ರದ ಬಗ್ಗೆಯಾಗಲಿ, ಕತೆಯ ಬಗ್ಗೆಯಾಗಲೀ ಗುಟ್ಟು ಬಿಟ್ಟುಕೊಡದವಿಜಯರಾಘವೇಂದ್ರರವರು, ಚಿತ್ರಕ್ಕಾಗಿ 22ಕೆಜಿ ತೂಕ ಇಳಿಸುವ ಹಾದಿಯಲ್ಲಿ ಈಗಾಗಲೆ 8ಕೆಜಿ ತೂಕ ಇಳಿಸಿ ಮುಂದಿನ ತಿಂಗಳೊಳಗೆ ಸಂಪೂರ್ಣ 22 ಕೆಜಿ ತೂಕ ಕಳೆದುಕೊಳ್ಳಲು ಲೋ ಕ್ಯಾಲೊರಿ ಡಯೆಟ್‌, ದಿನೆಕ್ಕೆರೆಡು ಬಾರಿ ಹೆವಿ ವರ್ಕೌಟ್‌ ಹೀಗೆ ಅನೇಕ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ನಿರ್ದೇಶಕ ಕಿಶೋರ್‌ ಮೂಡಬಿದ್ರೆಯವರನ್ನು ಚಿತ್ರದ ಬಗ್ಗೆ ಕೇಳಿದರೆ “ಇದು ನನ್ನ ನಿರ್ದೇಶನದ ಮೊದಲ ಕನ್ನಡ ಸಿನಿಮಾ ಆಗಿರುವುದರಿಂದ ಎಚ್ಚರಿಕೆಯಿಂದ ಹಾಗು ಪ್ರೀತಿಯಿಂದ ಚಿತ್ರದ ತಯಾರಿಯಲ್ಲಿದ್ದೇವೆ. ವಿಜಯ ರಾಘವೇಂದ್ರರವರ ಸಿನಿಬದುಕಿನಲ್ಲಿ ಇಂತದ್ದೊಂದು ಪಾತ್ರ ಮಾಡಿಲ್ಲ. ನಿರ್ದೇಶಕನಾಗಿಯೂ ಕೂಡ ವಿಜಯರಾಘವೇಂದ್ರರವರ ಪಾತ್ರ ನನಗೆ ಭಿನ್ನವಾಗಿದೆ ಎಂದೆನಿಸುತ್ತದೆ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನ ಬಳಿಯೂ ನೆನಪುಗಳದ್ದೊಂದು ಗುಚ್ಚವಿರುತ್ತದೆ. ಆ ನೆನಪುಗಳ ಸುತ್ತ ನಮ್ಮ ಈ “ಮಾಲ್ಗಡಿ ಡೇಸ್” ಕತೆಯೂ ಕೂಡ ಸಾಗುತ್ತದೆ” ಎಂದು ತಿಳಿಸುತ್ತಾರೆ.

ಈಗಾಗಲೇ ತೀರ್ಥಹಳ್ಳಿ, ಆಗುಂಬೆ,ಕಳಸ, ಪಾಂಡಿಚರಿ ಸುತ್ತಮುತ್ತ ಚಿತ್ರೀಕರಣ ನೆಡೆಸಿರುವ ಚಿತ್ರತಂಡ ಬೆಂಗಳೂರಿನಲ್ಲಿ ಇತ್ತೀಚಿಗಷ್ಟೆ ಮೊದಲ ಹಂತದ ಚಿತ್ರೀಕರಣವನ್ನು ಸಂಪೂರ್ಣ ಮುಗಿಸಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಪೂರ್ವ ತಯಾರಿ ನೆಡೆಸಿದೆ. ʻಮಾಲ್ಗುಡಿ ಡೇಸ್‌ʼಚಿತ್ರವನ್ನು ಕಳೆದ ವರ್ಷದ ಸೂಪರ್‌ ಹಿಟ್‌ ತುಳು ಚಿತ್ರದ ನಿರ್ಮಾಪಕರಾದ ಕೆ.ರತ್ನಾಕರ್‌ ಕಾಮತ್‌ರವರು ಸ್ವಯಂಪ್ರಭ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಬಿಗ್‌ ಬಾಸ್‌ ಖ್ಯಾತಿಯ ಧನರಾಜ್‌, ಗ್ರೀಷ್ಮ ಮತ್ತಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಹೆಸರಿನಿಂದಲೇ ಕುತೂಹಲ ಹುಟ್ಟಿಸಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಪ್ರೇಕ್ಷಕರ ಕುತೂಹಲ ದಿನದಿನಕ್ಕೂ ಹೆಚ್ಚಿಸುತ್ತಿದೆ ಎನ್ನುವುದಂತೂ ಸುಳ್ಳಲ್ಲ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed