ಶ್ರೀಮುರುಳಿ ರವರಿಂದ ಆಪರೇಶನ್ ನಕ್ಷತ್ರ ಟೈಟಲ್ ಬಿಡುಗಡೆ
Posted date: 07 Wed, Nov 2018 – 11:08:15 AM

 ಫೈವ್‌ಸ್ಟಾರ್ ಸಂಸ್ಥೆಯಲ್ಲಿ ನಂದಕುಮಾರ.ಎನ್, ಅರವಿಂದ ಮೂರ್ತಿ ಟಿ.ಎಸ್, ರಾಧಕೃಷ್ಣ ಹಾಗೂ ಕೀಶೊರ್ ಮೇಗಳಮನೆ ನಿರ್ಮಿಸಿರುತ್ತಿರುವ ಆಪರೇಶನ್ ನಕ್ಷತ್ರ ಚಿತ್ರದ ಶೀಷೀಕೆಯನ್ನು  ನಟ ಶ್ರೀಮುರುಳಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಶ್ರೀಮುರುಳಿ ಆಪರೇಶನ್ ನಕ್ಷತ್ರ ಅಂದ ಕೂಡಲೇ ಡಾ. ರಾಜ್ ಕುಮಾರ ಮಾಮಾರವರ ಆಪರೇಶನ್ ಡೈಮೆಂಡ್ ರಾಕೇಟ್ ಚಿತ್ರ ನೆನೆಪಿಗೆ ಬರುತ್ತದೆ. ಈ ಸಿನಿಮಾ ಕೂಡ ಅಷ್ಟೆ ದೊಡ್ಡ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಮಧುಸೂದನ್ ಅವರ ಚೊಚ್ಚಲ ನಿರ್ದೇಶನದವಿರುವ ಈ ಚಿತ್ರಕ್ಕೆ ಇಗಾಗಲೇ ಶೇಕಡ ೯೦ರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ಮಧುಸೂದನ್‌ರವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಹಣದ ಹಿಂದೆ ಹೋದವರ ಪರಿಸ್ಥಿತಿ ಏನೆಲ್ಲಾ  ಆಗುತ್ತದೆ ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕದೊಂದ್ದಿಗೆ ಹೇಳಲಾಗಿದೆ.  

ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಕಿಟ್ಟು ಅರ್ಜುನ್ ಸಂಕಲನ, ವಿಜಯ್ ಭರಮಸಾಗರ ಸಾಹಿತ್ಯ, ಕೀಶೊರ್ ಮೇಗಳಮನೆ, ಮಧುಸೂದನ್ ಸಂಭಾಷಣೆ, ಶರಣ್ ಗೆಣ್ಕಳ್ ಸಹ ನಿರ್ದೇಶನ ಅಲ್ಟಿಮೇಟ್ ಶಿವು ಸಾಹಸವಿದೆ. ನಿರಂಜನ್ ಒಡೆಯರ್, ಯಜ್ಞಾ ಶೆಟ್ಟಿ, ಅದಿತಿ ಪ್ರಭುದೇವ, ಲಿಖಿತ್ ಸೂರ್ಯ, ದೀಪಕ್ ರಾಜ್ ಶೆಟ್ಟಿ, ಶ್ರೀನವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್., ಇನ್ನೂ ಮುಂತಾದವರ ತಾರಾಬಳಗವಿದೆ.
    


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed