‘ಮಟಾಶ್ ನಾಳೆಯಿಂದ ತೆರೆಗೆ
Posted date: 06 Thu, Dec 2018 – 08:46:49 AM

ಗೋಲ್ಡ್ ಆಂಡ್ ಡ್ರೀಮ್ಸ್ - ಕ್ರೋಮ್ಸ್- ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸತೀಶ್ ಪಾಠಕ, ಗಿರೀಶ್ ಪಟೇಲ್, ಚಂದ್ರಶೇಖರ್ ಮಣೂರ ಹಾಗೂ ಎಸ್.ಡಿ.ಅರವಿಂದ ಅವರು ನಿರ್ಮಿಸಿರುವ ‘ಮಟಾಶ್‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  

ಎಸ್.ಡಿ.ಅರವಿಂದ್ ನಿರ್ದೇಶನದ ಈ ಚಿತ್ರಕ್ಕೆ ರಾನಿ ಅಬ್ರಾಹಿಂ ಅವರ ಛಾಯಾಗ್ರಹಣವಿದೆ. ಎಸ್.ಡಿ.ಅರವಿಂದ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಕೃಷ್ಣ ಹಾಗೂ ಎಸ್.ಡಿ.ಅರವಿಂದ್ ಹಿನ್ನಲೆ ಸಂಗೀತ ನೀಡಿದ್ದಾರೆ. ವಿನೋದ್ ಬಸವರಾಜ್ ಸಂಕಲನ ಹಾಗೂ ಅವಿನಾಶ್ ನರಸಿಂಹರಾಜು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಮರ್ಥ ನರಸಿಂಹರಾಜು, ಐಶ್ವರ್ಯ ಶಿಂಡೊಗಿ, ರಜನಿ ಭಾರದ್ವಾಜ್, ರಘು ರಮಣಕೊಪ್ಪ, ವಿ.ಮನೋಹರ್, ನಂದಗೋಪಾಲ್, ಸದಾನಂದ್ ಕಾಳಿ, ರವಿಕಿರಣ್ ರಾಜೇಂದ್ರನ್, ಸಿದ್ದಾಂತ್ ಸುಂದರ್, ರಂಗಸ್ವಾಮಿ, ಅಮೋಘ ರಾಹುಲ್, ಗಣೇಶ್ ರಾಜ್, ಬಾಲಾಜಿ ಪಿ ಶೆಟ್ಟಿ, ಗೌತಮ್, ನಾಗಾರ್ಜುನ್, ಸಿದ್ದು, ರೂಪ ಶ್ರೀಧರ್, ಅರ್ಜುನ್ ಅಸುರಿ ಮುಂತಾದವರಿದ್ದಾರೆ.    


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed