ಶರಣ್ ಕಂಠಸಿರಿಯಲ್ಲಿ ``ಜಸ್ಟ್ ಪಾಸ್``ಚಿತ್ರದ ಹಾಡು
Posted date: 26 Sun, Mar 2023 05:43:41 PM
ನಾಯಕರಾಗಿ ಪ್ರಸಿದ್ಧರಾಗಿರುವ ಶರಣ್ , ಗಾಯಕರಾಗೂ ಅಷ್ಟೇ ಪ್ರಸಿದ್ದಿ. ಸದ್ಯ ಕೆ.ಎಂ.ರಘು ನಿರ್ದೇಶನದ "ಜಸ್ಟ್ ಪಾಸ್" ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ "ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು" ಎಂಬ ಹಾಡನ್ನು ನಟ-ಗಾಯಕ ಶರಣ್ ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಸಾಧುಕೋಕಿಲ ಅಭಿನಯಿಸಿದ್ದಾರೆ. 

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್  ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.     ಶ್ರೀ "ಜಸ್ಟ್ ಪಾಸ್" ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿ ಪ್ರಣತಿ ಈ ಚಿತ್ರದ ನಾಯಕಿ. ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರುವ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed