?ಆಪ್ತ? ನಿಗೆ ಹಾಡುಗಳ ಬಾಕಿ
Posted date: 5/July/2010

ಅನು ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಸಂಜೀವ್‌ಕುಮಾರ್ ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಶಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಸಂಜೀವ್ ಕುಮಾರ್ ರವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಆಪ್ತ ಹೆಸರಿನ ಈ ಚಿತ್ರದಲ್ಲಿ ನಟಿ ಪೂಜಾಗಾಂಧಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಹಾಗೂ ಎರಡು ಹಾಡುಗಳ ಚಿತ್ರಣ ಮುಕ್ತಾಯಗೊಂಡಿದ್ದು, ಬಾಕಿ ಉಳಿದ ಮೂರು ಹಾಡುಗಳ ಚಿತ್ರೀಕರಣವನ್ನು ಇದೇ ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಚಿತ್ರದಲ್ಲಿ ಬರುವ ಉಳಿದ ೫ ಜನ ನಾಯಕಿಯರು ೫ ಗುಣಗಳನ್ನು ಹೊಂದಿರುತ್ತಾರೆ. ಈ ಐವರು ಅನುಮಾನಾಸ್ಪದವಾಗಿ ಕಾಣೆಯಾದಾಗ ಅವರಿಂದ ನಾಯಕಿಗೆ ಯಾವ ರೀತಿ ತೊಂದರೆಯುಂಟಾಗುತ್ತವೆ. ಅದನ್ನು ಆಕೆ ಹೇಗೆ ನಿಭಾಯಿಸಿಕೊಳ್ಳುತ್ತಾಳೆ ಎಂಬುದೇ ಆಪ್ತದ ಮುಖ್ಯ ಎಳೆ. ಜಿ.ವಿ. ಗಜೇಂದ್ರ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಪಿ.ಎಸ್. ಬಾಬು ಛಾಯಾಗ್ರಹಣ, ಎಸ್ಕರ್ ಮಾರಿಯೋ ಸಂಗೀತ ಸಂಯೋಜನೆ, ಆರ್.ಪಿ. ವೆಂಕಟ್ ಸಂಕಲನ ಹಾಗೂ ಪೆಂಟಾ ಶ್ರೀನಿವಾಸರಾವ್ ನಿರ್ಮಾಣ ಸಾರಧ್ಯ ವಹಿಸಿದ್ದಾರೆ. ಪ್ರಮುಖ ತಾರಾಗಣದಲ್ಲಿ ಪೂಜಾಗಾಂಧಿ, ಪ್ರಜ್ಞಾ, ಅಚ್ಯುತ್, ನೀರಜ್ ಷಾ, ಮಾನಸಿ, ಭವ್ಯಕಲಾ, ಸಂತೋಷ್ ಬಾಲಾಜಿ ಪ್ರಮುಖ ತಾರಾಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed