ಹಾಡಿನ ಚಿತ್ರೀಕರಣದಲ್ಲಿ ?ಶಂಭೋ ಶಂಕರ
Posted date: 13/December/2009

ನಾಟಕ ರಂಗದಲ್ಲಿ ಚಿಂದೋಡಿ ಮನೆತನಕ್ಕೆ ವಿಶೇಷ ಸ್ಥಾನವಿದೆ. ಚಿಂದೋಡಿ ಕಂಪನಿಯ ನಾಟಕಗಳು ಬಹಳ ಯಶಸ್ವಿಯೂ ಆಗಿದೆ. ಈ ರೀತಿ ಜನರ ಮನ್ನಣೆಗೆ ಪಾತ್ರವಾದ ‘ಎಷ್ಟು ನಗ್ತಿ ನಗು ನಾಟಕ ಚಲನಚಿತ್ರವಾಗಿ ಹೊರಹೊಮ್ಮಿತ್ತು ಚಿಂದೋಡಿ ಶ್ರೀಕಂಠೇಶ್ ಅವರ ಮೂಲಕ. ಈಗ ಇವರು ನಿರ್ಮಿಸುತ್ತಿರುವ ಎರಡನೇ ಚಿತ್ರ ‘ಶಂಭೋ ಶಂಕರ. ಬಹು ತಾರಾಗಣದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
     ಚಿಂದೋಡಿ ಬಂಗಾರೇಶ್ ಬರೆದಿರುವ ‘ಹಾಡು ಬಾರೋ ಓ ಗೆಳೆಯ - ಹಾಡ ಬನ್ನಿ ಗೆಳತಿಯರೇ ಎಂಬ ಗೀತೆಯ ಚಿತ್ರೀಕರಣ ನೆಲಮಂಗಲದ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆಯಿತ್ತು. ಮದನ್ ಹರಿಣಿ ನೃತ್ಯ ಸಂಯೋಜಿಸಿದ್ದ ಈ ಗೀತೆಯ ಚಿತ್ರೀಕರಣದಲ್ಲಿ ನವೀನ್‌ಕೃಷ್ಣ, ಚಿಂದೋಡಿ ವಿಜಯಕುಮಾರ್, ಚೇತನ್, ಶ್ರೀನಿವಾಸಮೂರ್ತಿ, ಅಶ್ವಿನಿ, ಶ್ರೀಗೌರಿ, ಸಂಜನ, ರೂಪಶ್ರೀ, ೫೦ಕ್ಕೂ ಹೆಚ್ಚು ಸಹಕಲಾವಿದರು ಹಾಗೂ ನೃತ್ಯಗಾರರು ಭಾಗವಹಿಸಿದ್ದರು.
    ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ಚೆಲುವ ನಾರಾಯಣನ ಚೆಂದದೂರಾದ ಮೇಲುಕೋಟೆ ಹಾಗೂ ಜಿ.ಆರ್.ಎಸ್ ಫ಼್ಯಾಂಟಸಿ ಪಾರ್ಕ್‌ನಲ್ಲಿ ನಡೆದಿದೆ. ‘ಬಂಬಂ ಶಂಕರ ಎಂದು ಆರಂಭವಾಗುವ, ಹಂಸಪ್ರೀತಿ ಅವರು ಬರೆದಿರುವ ಈ ಗೀತೆಯ ಚಿತ್ರೀಕರಣದಲ್ಲಿ ಚಿಂದೋಡಿ ವಿಜಯಕುಮಾರ್, ಸಂಜನಾ ಹಾಗೂ ಶ್ರೀಗೌರಿ ಭಾಗವಹಿಸಿದ್ದರು.
   ಎಂ.ಎಸ್.ಮಾರುತಿ ಸಂಗೀತ ನೀಡಿರುವ ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸುತ್ತಿದ್ದಾರೆ. ನಿರ್ವಹಿಸುತ್ತಿದ್ದಾರೆ. ಪ್ರಚಾರಕರಾಗಿ ಗುರುತಿಸಿಕೊಂಡಿರುವ ಮಸ್ತಾನ್ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನವೀನ್‌ಕೃಷ್ಣ, ಮೋಹನ್, ಚಿಂದೋಡಿ ವಿಜಯಕುಮಾರ್, ಶ್ರೀನಿವಾಸಮೂರ್ತಿ, ಅಶ್ವಿನಿ, ಶ್ರೀಗೌರಿ, ಸಂಜನ ಹಾಗೂ ರೂಪಶ್ರೀ ‘ಶಂಭೋ ಶಂಕರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed