ತೇಜ್ ಅಭಿನಯದ ``ಡ್ಯೂಡ್`` ಮೂವಿ ಮುಹೂರ್ತ
Posted date: 06 Sun, Aug 2023 09:23:33 PM
ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್,  ಆನಂತರ ಕನ್ನಡ ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಿವೈಂಡ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ತಾವೇ ನಟಿಸಿದ್ದರು.
 
ನಂತರ ರಾಮಾಚಾರಿ 2.0 ಎಂಬ ಸಿನಿಮಾದ ಮುಖಾಂತರ ಖ್ಯಾತಿ ಪಡೆದಿದ್ದರು.

ಇದೀಗ ಡ್ಯೂಡ್ ಎನ್ನುವ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ.
ಇದರ ಫಸ್ಟ್ ಲುಕ್ ರಿಲೀಸ್ ಆಗಿದ್ದು.
 
ವಿಲನ್ಗಳ ಮಧ್ಯದಿಂದ ತೇಜ್ ಮಾಸ್ ಲುಕ್ ನಲ್ಲಿ  ಎಂಟ್ರಿ ಕೊಡ್ತಿರೋ ಪೋಸ್ಟರ್ ರಿಲೀಸ್ ಆಗಿದೆ.
ಇಂದು ಈ ಸಿನಿಮಾದ ಮುಹೂರ್ತ ಲಾಂಚ್ ಆಗಿದೆ ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದು ಇನ್ನಷ್ಟು ವಿಶೇಷ.

ತೇಜ್ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾಗೆ, ಶಶಿಧರ್  ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಮೊಹಮದ್ ಅವರ ಸಂಗೀತ ಮಂಜು ದೊಡ್ಮನಿ ಅವರ ಸಾಹಿತ್ಯ ಇರಲಿದೆ. ಇನ್ನು ಈ ಸಿನಿಮಾದ ಹಾಡುಗಳಿಗೆ ರಾಜಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಈ ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ಬರೋಬ್ಬರಿ 12 ಜನ ಬ್ಯೂಟಿಫುಲ್ ಹೀರೋಯಿನ್ ಗಳು ಸಿನಿಮಾದಲ್ಲಿ ಇರಲಿದ್ದಾರೆ,
 ಪೂಜರಾಜು, ಚಿತ್ರಲ್ ರಂಗಸ್ವಾಮಿ ರೋಹಿಣಿ, ಪ್ರಣವಿ ಗೌಡ, ಸಹನಗೌಡ, ಸಾನಿಯಾ, ಜೀವತಾ, ದೃತಿ,  ಸೌಮ್ಯ, ರೊಸ್ಲಿಂಗ್, ಮಿಶೇಲ್ ನೊರೋನ, ಹೀಗೆ 12  ಜನ ನಾಯಕಿಯರು ಈ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದಾರೆ.
 
ಫುಟ್ಬಾಲ್ ಕ್ರೀಡೆಯ ಸುತ್ತ ತಿರುಗುವ ಈ ಸಿನಿಮಾದಲ್ಲಿ ರಂಗಾಯಣ ರಘು, ಸ್ಪರ್ಶ ರೇಖಾ, ಇನ್ನುಳಿದ ಅನುಭವಿ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed