ಖ್ಯಾತ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ ``ರಾನಿ`` ಆಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಯಿತು
Posted date: 17 Thu, Aug 2023 09:33:09 AM
ಬಹು ನಿರೀಕ್ಷಿತ “ರಾನಿ”(Ronny) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ comany T-ಸೀರಿಸ್  ಭಾರಿ ಮೊತ್ತಕ್ಕೆ ಖರೀದಿಸಿದೆ. ಇತ್ತೀಚೆಗೆ ಬಿಡುಗಡೆಯಾದ “Ronny”ಚಿತ್ರದ ಟೀಸರ್ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಬಾರಿ ಸದ್ದು ಮಾಡಿತ್ತು, ಗುರುತೇಜ್ ಶೆಟ್ಟಿ ನಿರ್ದೇಶನದ ರಾನಿ ಚಿತ್ರ ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು,  ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡುತ್ತಿದ್ದಾರೆ ನಾಯಕನಾಗಿ “ಕಿರಣ್ ರಾಜ್ ”ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡದ್ದಾರೆ, ಟೀಸರ್  ಪೋಸ್ಟರ್ ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ Ronny ಚಿತ್ರಕ್ಕೆ ಈಗ T-ಸೀರಿಸ್ ಜೊತೆಯಾಗಿರೋದು ಚಿತ್ರ ತಂಡಕ್ಕೆ ಇನ್ನಷ್ಟು ಹುಮ್ಮಸು ತಂದಿದೆ ಎನ್ನುತ್ತಾರೆ ನಿರ್ಮಾಪಕರು. 
 
ಮಣಿಕಾಂತ್ ಕದ್ರಿ ಚಿತ್ರಕ್ಕೆ 5 ಹಾಡುಗಳನ್ನು ಸಂಯೋಜಿಸಿದ್ದು,  “ಕಾಂತರ ”ಖ್ಯಾತಿಯ ಪ್ರಮೋದ್ ಮರವಂತೆ 5 ಹಾಡುಗಳನ್ನು ಬರೆದಿದ್ದಾರೆ, ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಅವರಂತಹ ಹೆಸರಾಂತ ಗಾಯಕರು ರಾನಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಸುಮಾರು 85 ದಿನಗಳ ಚಿತ್ರೀಕರಣ ಮುಗಿದಿದ್ದು ಒಂದು ಹಾಡಿನ ಚಿತ್ರಿಕರಣ ಬಾಕಿ ಇದೆ.  ಗ್ಯಾಂಗಸ್ಟರ್ ಕಥೆಯಾದರೂ ಮಾಸ್ ಎಲಿವೆಷನ್ ಇದ್ದರು ಕಿರಣ್ ರಾಜ್ ರವರ ಫ್ಯಾಮಿಲಿ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದಿದ್ದೇನೆ ಇದು ಫ್ಯಾಮಿಲಿ ಆಕ್ಷನ್ ಸಿನಿಮಾ ಎನ್ನುತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ, ಚಿತ್ರದಲ್ಲಿ ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ಮೂವರು ನಾಯಕಿಯರಿದ್ದು, ಪೋಷಕ ಪಾತ್ರದಲ್ಲಿ ರವಿಶಂಕರ್,   ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಬೇಡ ಸುರೇಶ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್,ಮಂಡ್ಯ ರಮೇಶ್ ಹೀಗೆ ದೊಡ್ಡ ತಾರಬಳಗವಿದೆ. ರಾಘವೇಂದ್ರ ಬೇಡ ಕೋಲಾರ ಛಾಯಾಗ್ರಾಹಣ, ಉಮೇಶ್ ಸಂಕಲನ ಸತೀಶ್ ಕಲಾ ನಿರ್ದೇಶನ ಧನಂಜಯ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದ್ದು, ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರ ತಂಡ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed