`ಬೈ ಒನ್ ಗೆಟ್ ಒನ್ ಫ್ರೀ` ಈ ವಾರ ರಾಜ್ಯಾದ್ಯಂತ ಬಿಡುಗಡೆ
Posted date: 09 Tue, Nov 2021 09:52:57 AM
ಎಸ್ ಬಿ ಎಸ್ ಸಿ  ಕ್ರಿಯೇಶನ್ ಅಡಿಯಲ್ಲಿ ಮೂಡಿಬರುತ್ತಿರುವ  ಬೈ ಒನ್ ಗೆಟ್ ಒನ್ ಫ್ರೀ ಚಿತ್ರವು ಇದೇ ತಿಂಗಳು 12ನೇ  ರಾಜ್ಯಾದ್ಯಂತ   ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವೊಂದಿದ್ದು, ಕಿಶೋರ್ ಅವರು ಒಂದು ವಿಭಿನ್ನ ಮತ್ತು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರದ ಮತ್ತೊಂದು ವಿಶೇಷ ವೆಂದರೆ ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಅವಳಿಜವಳಿ ಸಹೋದರರಾದ ಮದು ಮಿಥುನ್ ಮತ್ತು ಮನು ಮಿಲನ್ ನಾಯಕ ನಟರಾಗಿ ನಟಿಸಿದ್ದು, ರಿಷಿತ ಮಲ್ನಾಡ್ ಮತ್ತು ರೋಷಿನಿ ತೆಲ್ಕರ್ ನಾಯಕನಟಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ .
 
ಬಾಲರಾಜ್ ವಾಡಿ, ಪ್ರಶಾಂತ್, ಉಷಾ ಭಂಡಾರಿ, ಗೌರೀಶ್ ಅಕ್ಕಿ, ನಿನಾಸಂನ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಉತ್ತರಕನ್ನಡ ಕರಾವಳಿ, ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಥ್ರಿಲ್ಲರ್ ಅಂಶದ ಜೊತೆ ಹಾರರ್ ಎಲಿಮೆಂಟ್ಸ್ ಕೂಡ ಇಟ್ಟಿದ್ದಾರೆ ಅಂತ ನಿರ್ದೇಶಕರು ಹೇಳಿದ್ದಾರೆ .ಈ ಚಿತ್ರವನ್ನು ಮಧುರಾಜ್ ಸಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅನಿಲ್ ಸಿ ಜೆ ಬ್ಯಾಗ್ರೌಂಡ್ ಸ್ಕೋರ್, ದಿನೇಶ್ ಕುಮಾರ್ ಸಂಗೀತ, ಅಭಿಷೇಕ್ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ.
 
ಹೊನ್ನಾವರದ  ಹರೀಶ ಅನಿಲಗೋಡ ಅವರು ಚೊಚ್ಚಲ ಬಾರಿಗೆ ನಿರ್ದೇಶನದ ಜವಾಬ್ಧಾರಿ ಹೊತ್ತು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವೈಲೆಂಟ್ ವೇಲು, ರಮೇಶ್, ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಶ್ರೀಕಾಂತ್ ಮತ್ತು ಮನುರಾಜ್ ಸಂಭಾಷಣೆ ಬರೆದಿದ್ದಾರೆ. ದೇವಿ ಪ್ರಕಾಶ್ ಕಲೆ, ಬಾಲ ನೃತ್ಯ ಸಂಯೋಜನೆ ಮಾಡಿದ್ದಾರೆ. ಸುರೇಶ್ ಅರುಮುಗಮ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ನೋಡುಗರ ಮೆಚ್ಚುಗೆ ಪಡೆದುಕೊಂಡಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed