ಆರ್.ಚಂದ್ರು ಕನಸಿನ ``ಫಾದರ್``ಚಿತ್ರ ಮುಕ್ತಾಯದ ಹಂತದಲ್ಲಿ
Posted date: 24 Thu, Oct 2024 10:59:30 PM
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ 5 ಸಿನಿಮಾಗಳ ಟೈಟಲ್ ಲಾಂಚ್ ಮಾಡಿಸಿ ಸದ್ದು ಮಾಡಿದ್ದ ನಿರ್ಮಾಪಕ ಕಮ್ ನಿರ್ದೇಶಕ ಆರ್.ಚಂದ್ರು ನುಡಿದಂತೆ ಐದು ಸಿನಿಮಾಗಳಲ್ಲಿ ಮೊದಲನೆದಾಗಿ ಫಾದರ್ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ..
 
ರಾಜ್ ಮೋಹನ್ ನಿರ್ದೇಶನದಲ್ಲಿ ಫಾದರ್ ಸಿನಿಮಾ ಮೂಡಿ ಬರುತ್ತಿದ್ದು ಕೊನೆಯ ಹಂತದ ಶೂಟಿಂಗ್ ಆನೇಕಲ್ ತಾಲೂಕಿನ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದೆ.
 
ಚಂಪಕಧಾಮಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜನ ಜೂನಿಯರ್ ಆರ್ಟಿಸ್ಟ್ ಗಳ ಸಮೂಖದಲ್ಲಿ ಫಾದರ್ ಚಿತ್ರದ ಸಾಹಸದೃಶ್ಯಗಳು ಸೇರೆಯಾಗುತ್ತಿದೆ.
ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದ್ದು ಸುಜ್ಞಾನಮೂರ್ತಿ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬರುತ್ತಿದೆ.
 
ಡಾರ್ಲಿಂಗ್ ಕೃಷ್ಟ , ಪ್ರಕಾಶ್ ರಾಜ್ ನಟನೆಯ ತಂದೆ-ಮಗನ ಬಾಂಧವ್ಯ ಸಾರುವ ಮನಮುಟ್ಟುವ ಸಿನಿಮಾ ಫಾದರ್ ಚಿತ್ರವಾಗಿದೆ.. ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿದ್ದ ಫಾದರ್ ಟೀಮ್ ಈಗ ಕೊನೆ ಹಂತದ ಚಿತ್ರಕರಣದಲ್ಲಿದೆ.
 
ಕೆಲವೇ ದಿನಗಳಲ್ಲಿ ಆ್ಯಕ್ಷನ್ ದೃಶ್ಯಗಳಿಗಾಗಿ ಫಾದರ್ ಟೀನ್ ವಾರಣಾಸಿಗೆ  ಪ್ರಯಾಣ ಬೆಳಸಲಿದೆ ಚಿತ್ರತಂಡ..
 
ಶೀಘ್ರದಲ್ಲೇ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರತಂಡದಿಂದ ಮತ್ತಷ್ಟು ಅಪ್ ಡೇಟ್ ಗಳು ಹೊರಬಿಳಲಿದೆ...
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed