ರಾಮು ಅವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂತಾಪ
Posted date: 28 Wed, Apr 2021 01:18:46 PM
ವರನಟ ಡಾ||ರಾಜಕುಮಾರ್ ಅವರು‌ ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುತ್ತಿದ್ದರು.‌ ಅದು ಅಕ್ಷರಶಃ ಸತ್ಯ. ಒಬ್ಬ ನಿರ್ಮಾಪಕ ಚಿತ್ರ ಮುಗಿಯುವವರೆಗೂ ಎಷ್ಟು ಸಂಸಾರಕ್ಕೆ ಕೆಲಸ ನೀಡಿ ಆಸರೆಯಾಗಿರುತ್ತಾನೆ.
ಕನ್ನಡ ಚಿತ್ರರಂಗದಲ್ಲಿ ಮೂವತ್ತಕ್ಕೂ ಹೆಚ್ಚು ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ಕೋಟಿ ನಿರ್ಮಾಪಕರೆಂದೆ ಖ್ಯಾತರಾಗಿದ್ದ ರಾಮು ಅವರು ಇಂದು ನಿಧನರಾಗಿದ್ದಾರೆ. ಅವರ ಸಾಕಷ್ಟು ಚಿತ್ರಗಳಿಗೆ ನಾವು ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸಿದ್ದೇವೆ.‌ 
ತಮ್ಮ ಚಿತ್ರದಲ್ಲಿ ಕೆಲಸ ‌ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ, ರಾಮು ಅವರ ನಿಧನದ ಸುದ್ದಿ ‌ತಿಳಿದು ಬಹಳ ಬೇಸರವಾಗಿದೆ.‌
ರಾಮು ಅವರ ನಿಧನಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ‌ ತೀವ್ರ ಸಂತಾಪ ಸೂಚಿಸುತ್ತದೆ.

ಇಂತಿ
ಸುಧೀಂದ್ರ ವೆಂಕಟೇಶ್ 
ಶ್ರೀ ರಾಘವೇಂದ್ರ ಚಿತ್ರವಾಣಿ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed