``ಅಕ್ಕಮಹಾದೇವಿ`` ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ
Posted date: 31 Sun, Mar 2024 01:50:39 PM

ಭರತ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಜಗನ್ಮಾತೆ ಅಕ್ಕಮಹಾದೇವಿ ಚಿತ್ರಕ್ಕೆ ಹಂಸಲೇಖ ಸ್ಟುಡಿಯೋವಿನಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ರಚಿಸಿ, ನಿರ್ಮಾಪಕರಾಗಿ ನಿರ್ದೇಶನ ಮಾಡುತ್ತಿದ್ದಾರೆ-ವಿಷ್ಣ್ಣುಕಾಂತ್.ಬಿ.ಜೆ, ಛಾಯಾಗ್ರಹಣ-ರವಿ ಸುವರ್ಣ, ಸಂಗೀತ-ಆರ್.ಪಳನಿ ಸೇನಾಪತಿ, ನಿರ್ವಹಣೆ-ರಂಗಸ್ವಾಮಿ, ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಶ್ರೀ.ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರ 21  ವಚನಗಳಿಗೆ ನಿರ್ದೇಶಕ ವಿಷ್ಣುಕಾಂತ್ ರಚಿಸಿರುವ ೩ ಗೀತೆಗಳು ಲೈವ್ ವಾದ್ಯಗಳೊಂದಿಗೆ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ. ವಿಷ್ಣುಕಾಂತ್, ಸುರಕ್ಷಾ, ಭವ್ಯ, ಬಿರಾದರ್, ಎಂ.ಪಾಟೀಲ್ ಮುಂತಾದವರಿದ್ದಾರೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಚಿತ್ರೀಕರಣ, ಶಿವಮೊಗ್ಗ, ಬೀದರ್, ಮಂಗಳೂರು, ಶ್ರೀಶೈಲ, ಹಿಮಾಲಯ ಆಯ್ಕೆಯಾಗಿರುವ ಸ್ಥಳಗಳು.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed