``ಆನ`` ಚಿತ್ರದ ಟೀಸರ್ ಗೆ ಅಪಾರ ಮೆಚ್ಚುಗೆ
Posted date: 04 Sun, Apr 2021 11:55:59 AM
ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ನ‌ ``ಆನ`` ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ, ಒಂದು ಮಿಲಿಯನ್ ಗೂ ಅಧಿಕ ಸಂಖ್ಯೆ ಯಲ್ಲಿ ವೀಕ್ಷಣೆಗೊಂಡು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂತಸ‌ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ‌ ಆಯೋಜಿಸಿತ್ತು. 
ಚಿತ್ರದ ನಿರ್ದೇಶಕ ಮನೋಜ್ ಪಿ ನಡಲುಮನೆ ಮಾತನಾಡಿ, ನಮ್ಮ ಚಿತ್ರದ ಟೀಸರ್ ಗೆ ಅಪಾರ ಬೆಂಬಲ ಸೂಚಿಸುತ್ತಿರುವ ಎಲ್ಲರಿಗೂ ‌ನಾನು ಚಿರ ಋಣಿ. ನಮ್ಮ ಟೀಸರ್ ಗೆ ಇಲ್ಲಿ ಮಾತ್ರ‌ ಅಲ್ಲ,  ನೆರೆರಾಜ್ಯಗಳಿಂದಲ್ಲೂ ಟೀಸರ್ ವೀಕ್ಷಿಸಿದವರು ನನಗೆ ದೂರವಾಣಿ ಮೂಲಕ ಪ್ರಶಂಸೆ ನೀಡುತ್ತಿದ್ದಾರೆ.‌
ಉತ್ತಮ ಚಿತ್ರ ನಿರ್ಮಾಣ ಮಾಡಲು ಮುಂದಾದ ನನ್ನ ನಿರ್ಮಾಪಕರಿಗೆ, ಅದಿತಿ ಪ್ರಭುದೇವ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನಾನು ಆ ಭಾರಿ.
ಇನ್ನೂ ಹತ್ತುದಿನಗಳಲ್ಲಿ ಸಿನಿಮಾದ ಮೊದಲಪ್ರತಿ ಸಿದ್ದವಾಗಲಿದ್ದು, ಏಪ್ರಿಲ್ ಕೊನೆವಾರ ಅಥವಾ ಮೇ ನಲ್ಲಿ ತೆರೆಗೆ ತರುತ್ತೇವೆ ಎಂದರು.
ನಾಯಕಿ ಅದಿತಿ ಪ್ರಭುದೇವ ಮಾತನಾಡುತ್ತಾ ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಮುಂದೇನು? ಎಂಬ ಪ್ರಶ್ನೆ ಎದುರಾಗಿತ್ತು. ಅಂತ ಸಮಯದಲ್ಲಿ ನಮ್ಮ ನಿರ್ಮಾಪಕರು ಈ ಚಿತ್ರದ ಕಥೆ ಇಷ್ಟಪಟ್ಟು ಚಿತ್ರ‌ ನಿರ್ಮಾಣ ಮಾಡಿದ್ದಾರೆ. ಅವರ ಸಾಹಸ ಮೆಚ್ಚಲೇಬೇಕು. ನಾನು ಮೊದಲಿನಿಂದಲೂ ಹಾರಾರ್, ಫ್ಯಾಂಟಸಿ ಸಿನಿಮಾ ಹೆಚ್ಚು ನೋಡುತ್ತೇನೆ .‌  ಆ ಚಿತ್ರಗಳನ್ನು ನೋಡಿದಾಗ ನಾನು ಈ ರೀತಿ ಪಾತ್ರ‌ ಮಾಡಬೇಕು ಅಂದುಕೊಳ್ಳುತ್ತಿದೆ.‌ ಅಂತಹ ಪಾತ್ರ‌ ನನಗೆ ಸಿಕ್ಕಿರುವುದು ನನಗೆ ಸಂತಸ ತಂದಿದೆ ಎಂದರು.
ಚಿತ್ರದ ಪ್ರಮುಖಪಾತ್ರದಲ್ಲಿ‌ ಕಾಣಿಸಿಕೊಂಡಿರುವ ಸುನೀಲ್ ಪುರಾಣಿಕ್ ಅವರು‌ ತಮ್ಮ‌ ಪಾತ್ರದ‌ ಬಗ್ಗೆ ಮೆಚ್ಚುಗೆ ‌ಸೂಚಿಸಿ, ನಿರ್ಮಾಪಕ, ನಿರ್ದೇಶಕ ಹಾಗೂ ತಮ್ಮ ಜೊತೆ ಅಭಿನಯಿಸಿರುವ ಕಲಾವಿದರ ಕಾರ್ಯವನ್ನು ಶ್ಲಾಘಿಸಿದರು.
ಛಾಯಾಗ್ರಾಹಕ ಉದಯ್ ಲೀಲಾ, ಸಂಕಲನಕಾರ ವಿನೀತ್ ಚಂದ್ರ, ಕಲಾವಿದರಾದ ಚೇತನ್ ಗಂಧರ್ವ, ಶಿವಮಂಜು, ರನ್ವಿತ್ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಯು.ಕೆ.ಪ್ರೊಡಕ್ಷನ್ಸ್_ ಲಾಂಛನದಲ್ಲಿ
 ಶ್ರೀಮತಿ ಪೂಜಾ ವಸಂತಕುಮಾರ್ ಈ 
 ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್
ಅವರ ಸಂಗೀತ ನಿರ್ದೇಶನವಿರುವ ಆನ ಗೆ ವಿಜೇತ್ ಚಂದ್ರ ಅವರ ಸಂಕಲನವಿದೆ.
 ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್,  ಶಿವಮಂಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed