``ಕಲಿ ಕುಡುಕರು``ಚಿತ್ರದ ಟ್ರೈಲರ್ ಬಿಡುಗಡೆ
Posted date: 09 Fri, Feb 2024 09:14:44 PM
ಎ.ಎಂ ಕ್ರಿಯೇಷನ್ ಬ್ಯಾನರ್ ಅಡಿ  ಮಹೇಶ್ ಎನ್ ನಿರ್ಮಾಣ ಮಾಡಿ ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವ  "  ಕಲಿ ಕುಡುಕರು"  ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
 
ಒಬ್ಬ ಆಟೋ ಡ್ರೈವರ್,  ಇನ್ನೊಬ್ಬ ಉಂಡಾಡಿ ಗುಂಡ,ಮತ್ತೊಬ್ಬ ರಿಯಲ್ ಎಸ್ಟೇಟ್ ಬ್ರೋಕರ್ ,ಇದರ ಜೊತೆಗೆ ಇನ್ನೊಬ್ಬ ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೊಬ್ಬನ ಸುತ್ತ  ಸಾಗುವ ಕಥೆ ಚಿತ್ರ ಒಳಗೊಂಡಿದೆ.
 
ತಮ್ಮ ಕುಟುಂಬದಲ್ಲಿ ಆಗುವ ಅನಾಹುತಗಳಿಗೆ ಸಮಸ್ಯೆಗಳಿಗೆ ಒಳಗಾಗಿ ಕುಡಿತಕ್ಕೆ ದಾಸರಾಗುತ್ತಾರೆ ,ಕುಡಿತವೇ ಇವರ ಜೀವನಾಗುವಷ್ಡರ ಮಟ್ಟಿಗೆ ಚಟವಾಗಿಸಿಕೊಂಡವರು. ನಿರುದ್ಯೋಗಿ ಯುವಕನನ್ನು ಆಗರ್ಭ ಯುವತಿಯನ್ನು ಪ್ರಿತಿಸುತ್ತಾಳೆ‌ ಆದರೆ ಹುಡುಗಿ ರೌಡಿಗಳಿಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.ರೌಡಿಗಳು ಆಕೆಯನ್ನು ನೇಣು ಹಾಕುತ್ತಾರೆ. ರೌಡಿಗಳಿಗೆ ಇನ್ಸ್ ಪೆಕ್ಟರ್ ಸಹಾಯ ಇರುತ್ತದೆ. ಹೀಗಿರುವಾಗ ನಾಲ್ಕು ಜನ ನಾಯಕರು ಮತ್ತು ಸ್ನೇಹಿತ ಸೇರಿ ರೌಡಿಗಳನ್ನು ಮತ್ತು ಇನ್ಸ್ ಪೆಕ್ಟರ್ ಅವರನ್ನು ಹೇಗೆ ಸಾಯಿಸುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.
 
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಹೇಶ್ ಎನ್., ಸಿನಿಮಾ ಮಾಡ್ತೇವೆ ಅಂತ ಅಂದುಕೊಂಡು  ಮಾಡಿದ್ದೇವೆ.  ನಾಲ್ಕು ಜನರ ಪಾತ್ರದ ಸುತ್ತ,  ಸಾಗಲಿದೆ, ರಿಯಾಲಿಟಿ ಶೋ ಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತ ಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು  "ಎ" ಸರ್ಟಿಫಿಕೇಟ್ ಸಿಕ್ಕಿದೆ.  ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.
 
ನಾಗೇಂದ್ರ ಅರಸ್ ಮಾತನಾಡಿ, ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಹೊಸ ತಂಡಕ್ಕೆ ಸಹಕಾರ  ಯಾವತ್ತೂ ಸಹಕಾರ ಇದ್ದೇ ಇರುತ್ತೆ. ಉತ್ಸಾಹಿ ತಂಡ ಹುರುಪಿನಿಂದ‌ ಕೆಲಸ ಮಾಡಿದ್ದೇನೆ. ಹೊಸ ತಂಡ ಭಯ ಪಡುವರು.‌ತಂಡಕ್ಕೆ ಸಹಕಾರ ನೀಡಿದ್ದೇನೆ ಎಂದರು  ಸೋನು ಗೌಡ ,ಆಟೋ ಡ್ರೈವರ್ ಪಾತ್ರ,  ಪಿಲ್ಮ್ ಫಿಲ್ಡ್ ಹೋಗಿ  ವಾಪಸ್ ಬರುವ ಪಾತ್ರ ಎಂದರೆ ಮತ್ತೊಬ್ಬ ನಾಯಕಿ ರಿತ್ಯಾ ಅನಾಥ ಹುಡುಗನನ್ನು ಮದುವೆಯಾಗುತ್ತೇನೆ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದರು
ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಬಡ್ಡಿ ಬಂಗಾರಮ್ಮ ಪಾತ್ರ, ಮನೆ ಮನೆಯ ಪಾತ್ರ ಎಂದರೆ ಲೋಹಿತ್, ರವೀಶ್, ಮುರುಳಿ ಮಾಹಿತಿ ಹಂಚಿಕೊಂಡರು.
 
ತಾರಾಗಣದಲ್ಲಿ ಮಹೇಶ್ ಎನ್, ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್ ,ರಿತ್ಯಾ ,ಸೋನು ದೀಪು, ಶೃತಿ , ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ ಮತ್ತಿತರರು ಚಿತ್ರದಲ್ಲಿದ್ದಾರೆ
ಚಿತ್ರಕ್ಕೆ ಸನ್ನಿ ಮಾಧವನ್  ಸಂಗೀತವಿದ್ದು ಎರಡು ಹಾಡುಗಳಿವೆ.  ಚಿತ್ತೋರ್ ಸೂರಿ  ಕ್ಯಾಮರ ,,ಶ್ರೀರಂಗ ಹಾಲುವಾಗಿಲು ಸಾಹಿತ್ಯ, ಸುಪ್ರೀಂ ಸುಬ್ಬ ಸಾಹಸ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed