``ಕೃಷ್ಣ ಟಾಕೀಸ್`` ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡದ ತೀರ್ಮಾನ
Posted date: 19 Mon, Apr 2021 05:43:00 PM
ಏಪ್ರಿಲ್ 16 ರಂದು ಬಿಡುಗಡೆಯಾಗಿದ್ದ, ಅಜೇಯ್ ರಾವ್ ಅಭಿನಯದ, ವಿಜಯಾನಂದ್ ನಿರ್ದೇಶನದ‌ ``ಕೃಷ್ಣ ಟಾಕೀಸ್`` ಚಿತ್ರ ಒಳ್ಳೆಯ ಆರಂಭಪಡೆದುಕೊಂಡು ಪ್ರೇಕ್ಷಕರ ಮನಗೆದ್ದಿದೆ. ಪತ್ರಕರ್ತರಿಂದಲೂ ಉತ್ತಮ ವಿಮರ್ಶೆ ದೊರೆತಿದೆ.‌
 
ಆದರೆ ಕೊರೋನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ

ಸರ್ಕಾರ ಕೂಡ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡುವ ಸಾಧ್ಯತೆಯಿದೆ.‌
ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ನೋಡೋಣ. ಆದರೆ ಚಿತ್ರದ ನಿರ್ಮಾಪಕ ಗೋವಿಂದರಾಜು  ಹಾಗೂ ಚಿತ್ರತಂಡದವರು ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಹಾಗೊಂದು ವೇಳೆ ಸರ್ಕಾರ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. 
ಈ ಸಮಸ್ಯೆಗಳು ಬಗ್ಗೆಹರಿದ ಮೇಲೆ ಮತ್ತೆ ``ಕೃಷ್ಣ ಟಾಕೀಸ್``  ಪುನಃ ಬಿಡುಗಡೆ ಯಾಗಲಿದೆ.
 
ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದ ಚಿತ್ರರಸಿಕರಿಗೆ ಹಾಗೂ ಮಾಧ್ಯಮದವರಿಗೆ  ಚಿತ್ರತಂಡ  ಧನ್ಯವಾದ  ತಿಳಿಸಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed