``ದೂರ ತೀರ ಯಾನ``ಸಿನೆಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣ
Posted date: 22 Tue, Oct 2024 12:54:56 PM
ಡಿ ಕ್ರಿಯೇಷನ್ಸ್ ಬ್ಯಾನರಿನ ಅಡಿಯಲ್ಲಿ ದೇವರಾಜ್ ಆರ್ ನಿರ್ಮಾಣದ “ದೂರ ತೀರ ಯಾನ “ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದ್ವಿತೀಯ ಹಂತದ ಚಿತ್ರೀಕರಣ ಸಧ್ಯದಲ್ಲೇ ಆರಂಭವಾಗಲಿದೆ. 
 
ಮಂಸೋರೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸತಲೆಮಾರಿನ ಸಂಗೀತಮಯ ಪ್ರೇಮಕಥೆಯ ಈ ಸಿನೆಮಾದ ಮುಖ್ಯಪಾತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಟಿಸುತ್ತಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣ, ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ, ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಅವರ ಗೀತ ಸಾಹಿತ್ಯ, ನಾಗೇಂದ್ರ ಕೆ ಉಜ್ಜನಿ ಸಂಕಲನ, ಸರವಣ ಅವರ ಕಲಾ ನಿರ್ದೇಶನ ಹಾಗೂ ವಿವಿಡ್ ಐ ನಿರ್ಮಾಣ ವಿನ್ಯಾಸದ ಹೊಣೆ ಈ ಸಿನೆಮಾಕ್ಕಿದೆ. ಈ ಸಿನಿಮಾದಲ್ಲಿ ಮುಖ್ಯವಾದ ವಿಶೇಷ ಪಾತ್ರಗಳಲ್ಲಿ ಹಲವರು ಪ್ರಮುಖ ನಟಿ-ನಟರು ನಟಿಸಿದ್ದು ಅವರ ವಿವರಗಳನ್ನು ಸದ್ಯದಲ್ಲೆ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed