``ದೀಪು ಗೆಳೆಯರ ಬಳಗ`` ಸ್ಟೀಫನ್ ಪ್ರಯೋಗ್ ಅವರ ನೂತನ ಪ್ರಯೋಗ
Posted date: 29 Mon, Aug 2022 09:50:01 AM
ಸ್ಟೀಫನ್ ಪ್ರಯೋಗ್ ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ  ಪರಿಚಿತ. ``ದೀಪು ಗೆಳೆಯರ ಬಳಗ`` ಎಂಬ ಕಿರುಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಟೀಫನ್ ಪ್ರಯೋಗ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ನಾನು ಸಂಗೀತ ವಿಭಾಗದಲ್ಲಿ ಹಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ``ಪ್ಯಾರಿಸ್ ಪ್ರಣಯ`` ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಬಂದಿದೆ. ತಮಿಳಿನಲ್ಲೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ್ದೀನಿ.  
ಕೊರೋನ ಸಮಯದಲ್ಲಿ ನನಗೆ ನಿರ್ದೇಶನದತ್ತ ಒಲವಾಯಿತು. ಆದರೆ ನನಗೆ ನಿರ್ದೇಶನದ ಬಗ್ಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಆನ್ ಲೈನ್ ಮೂಲಕ ನಿರ್ದೇಶನದ ಕಾರ್ಯವೈಖರಿ ಕಲಿತೆ. ಅತ್ಯುತ್ತಮ ಕೋರ್ಸ್ ಅದು. ನನಗೆ ತುಂಬಾ ಉಪಕಾರವಾಯಿತು. ಆನಂತರ ನಾಲ್ಕೈದು ಕಥೆ ಸಿದ್ದಮಾಡಿಕೊಂಡು ನನ್ನ ಆಪ್ತ ಸ್ನೇಹಿತರ ಬಳಿ‌ ಚರ್ಚಿಸಿದೆ. ಎಲ್ಲರೂ ಈ ಕಥೆಯನ್ನೇ ಆಯ್ಕೆ ಮಾಡಿದರು. ರಂಗಭೂಮಿಯ ಸಾಕಷ್ಟು ಕಲಾವಿದರು "ದೀಪು ಗೆಳೆಯರ ಬಳಗ"ದಲ್ಲಿ ಅಭಿನಯಿಸಿದ್ದಾರೆ. ನಾನೇ ಸಂಗೀತವನ್ನು ನೀಡಿದ್ದೀನಿ. ಇದರಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ನಾನು, ನಿಜಜೀವನದಲ್ಲಿ ಅನುಭವಿಸಿದ್ದೀನಿ ಅಂದರೆ ತಪ್ಪಾಗಲಾರದು. ಹಿರಿತೆರೆಯಲ್ಲೂ ಎರಡು ಚಿತ್ರಗಳನ್ನು ನಿರ್ದೇಶಿಸಲಿದ್ದೇನೆ.‌ ಸದ್ಯದಲ್ಲೇ ಆ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದರು ನಿರ್ದೇಶಕ ಸ್ಟೀಫನ್ ಪ್ರಯೋಗ್.

ದೀಪು ಪಾತ್ರ ಮಾಡಿರುವ ರೂಪಾಂತರ ತಂಡದ ವರುಣ್ ಕುಮಾರ್ ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಕಿರುಚಿತ್ರದಲ್ಲಿ ಅಭಿನಯಿಸಿರುವ ಪ್ರಶಾಂತ್, ಭರತ್ ಕುಮಾರ್, ಉಮಾ ಹಾಗೂ  ಸತೀಶ್ ಚೌಹಾನ್ ತಮ್ಮ ಪಾತ್ರ ಹಾಗೂ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಸ್ಟೀಫನ್ ಪ್ರಯೋಗ್ ಕಥೆ, ಚಿತ್ರಕಥೆ ಬರೆದು, ಸಂಗೀತ ನೀಡಿ ನಿರ್ದೇಶಿಸಿರುವ ಈ ಕಿರುಚಿತ್ರಕ್ಕೆ ಗಂಗಾಧರ್ ತಲಕಾಡ್ ಹಾಗೂ ಪ್ರಶಾಂತ್ ತಲಕಾಡ್ ಅವರ ಛಾಯಾಗ್ರಹಣವಿದೆ. 
ವರುಣ್ ಕುಮಾರ್, ವಿಸ್ಮಿತ್ ರಾಜ್, ಪ್ರಾಶಾಂತ್, ಉಮಾ, ಸತೀಶ್ ಚೌಹಾನ್, ಭರತ್, ಕೆ.ಎಸ್.ಡಿ.ಎಲ್ ಚಂದ್ರು, ಭರತ್ ಕುಮಾರ್, ವೆಂಕಟಾಚಲ, ರಾಜಕುಮಾರ್ ಅಸ್ಕಿ ಹಾಗೂ ದೇಸಿ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed