``ಲಂಕೆ`` ಗೆ ಶತಕದ ಸಡಗರ
Posted date: 24 Fri, Dec 2021 08:15:30 AM
ಕಳೆದೆರಡು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕಾದ ನಷ್ಟ ಅಷ್ಟಿಷ್ಟಲ್ಲ.‌ ಈಗ ಚಿತ್ರರಂಗ ತುಸು ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಂತಸದ ಸದ್ದಿ ಎಂದರೆ, ಲೂಸ್ ಮಾದ ಯೋಗಿ ಅಭಿನಯದ ``ಲಂಕೆ`` ಚಿತ್ರ ಶತದಿನೋತ್ಸವ ಪೂರೈಸಿದೆ. ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ಶತದಿನೋತ್ಸವ ಪೂರೈಸಿರುವುದಕ್ಕೆ, ಚಿತ್ರತಂಡ ಹಾಗೂ ಚಿತ್ರರಂಗ ಎರಡರಲ್ಲೂ ಸಂಭ್ರಮ ಮನೆ ಮಾಡಿದೆ. 

ಲೂಸ್ ಮಾದ ಯೋಗಿ ಅವರನ್ನು ಹೊಸ ಲುಕ್ ನಲ್ಲಿ ಕಂಡ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಎಸ್ಟರ್ ನರೋನ‌ ಅವರ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಚಿತ್ರ ನಿರ್ದೇಶನ ಮಾಡಿದ ತೃಪ್ತಿಯಿದೆ ಎನ್ನುವ ನಿರ್ದೇಶಕ ರಾಮಪ್ರಸಾದ್ ಎಂ.ಡಿ, ಚಿತ್ರದ ಯಶಸ್ಸಿಗೆ ಕಾರಾಣರಾದ ಸಮಸ್ತರಿಗೂ ಧನ್ಯವಾದ ತಿಳಿಸಿದ್ದಾರೆ. 

 ಈ ಚಿತ್ರದಲ್ಲಿ ಅಭಿನಯಿಸಿ, ಬಿಡುಗಡೆಗೂ ಪೂರ್ವದಲ್ಲೇ ಇಹಲೋಕ ತ್ಯಜಿಸಿದ ಸಂಚಾರಿ ವಿಜಯ್ ಅವರಿಗೆ ಈ ಗೆಲುವನ್ನು ಅರ್ಪಿಸುವುದಕ್ಕೆ ನಿರ್ದೇಶಕರು ತೀರ್ಮಾನಿಸಿದ್ದಾರೆ.

ಜನವರಿ ಮೊದಲವಾರದಲ್ಲಿ ಶತದಿನೋತ್ಸವ ಸಮಾರಂಭವನ್ನು ಆಚರಿಸಲು ಸಿದ್ದತೆ ನಡೆಯುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed