``ಬುದ್ದ``ನಾಗಿ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು
Posted date: 15 Wed, Feb 2023 10:25:22 AM
ವತ೯ನ್ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ, ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ವಿದ್ಯಾರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ "ಬುದ್ದ" ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ  ಫಸ್ಟ್ ಲುಕ್ ಕನ್ನಡ ಜನತೆಯ ಮೆಚ್ಚುಗೆಯನ್ನು ಗಳಿಸಿದೆ . 

ಎಂಜಿನಿಯರಿಂಗ್ ವ್ಯಾಸಂಗ ಮಾಡಿ, ಅಭಿನಯದ ಬಗ್ಗೆ ತರಭೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. 

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆಯಿದೆ. "ಬುದ್ದ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಎಲ್ಲಾ ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೆ ಕಳೆದು ಹೋಗುತ್ತಾನೆ. ಮುಂದೇನು? ಎಂಬುದೆ ಕುತೂಹಲ. 
ಎಂದು ಚಿತ್ರದ ಕಥೆಯ ತಿರುಳನ್ನು ಹೇಳಿರುವ ನಾಯಕ ಮಹೇಶ್ ಬಾಬು, ಇದೊಂದು ಕೌಟುಂಬಿಕ ಚಿತ್ರ ಎನ್ನುತ್ತಾರೆ. 

ಚಿತದಲ್ಲಿ ಐದು ಹಾಡುಗಳಿದೆ. ಒಂದು ಹಾಡನ್ನು ಡಾ||ವಿ.ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ.
ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಮಹೇಶ್ ಬಾಬು, ವಿದ್ಯಾರಾಜ್, ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದಲ್ಲಿ ನಟಿಸುವ ಸಾಧ್ಯತೆಯಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed