``ಲಂಕಾಸುರ`` ನ ಟೈಟಲ್ ಟ್ರ್ಯಾಕ್ ಗೆ ಅಭಿಮಾನಿಗಳು ಫಿದಾ
Posted date: 31 Sun, Jul 2022 10:39:12 AM
ನಟ ವಿನೋದ್ ಪ್ರಭಾಕರ್ ತಮ್ಮ ಟೈಗರ್ ಟಾಕೀಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಮೊದಲ ಚಿತ್ರ ``ಲಂಕಾಸುರ``. ನಿಶಾ ವಿನೋದ್  ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ವಿನೋದ್ ಪ್ರಭಾಕರ್ ಅವರೆ ಈ ಚಿತ್ರದ ನಾಯಕನಾಗೂ ನಟಿಸಿದ್ದಾರೆ. 

ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ 
``ಅಣ್ಣ ಗನ್ ಹಿಡ್ದು  ನಿಂತ ಅಂದ್ರೆ ಭಸ್ಮಾಸುರ. 
ಲಾಂಗ್ ಹಿಡ್ದು  ನಡ್ಕೊಂಡು ಬಂದ್ರೆ ಲಂಕಾಸುರ  ..
ಲಂಕಾಸುರ   ಲಂಕಾಸುರ `` ಎಂಬ ``ಲಂಕಾಸುರ``ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ A2 music ಮೂಲಕ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಟೈಟಲ್ ಟ್ರ್ಯಾಕ್ ಈಗಾಗಲೇ  ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಟೈಟಲ್ ಟ್ರ್ಯಾಕ್ ಗೆ ಅಪಾರ ಜನಮನ್ನಣೆ ದೊರಕುತ್ತಿರುವುದಕ್ಕೆ ವಿನೋದ್ ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಿಜೇತ್ ಕೃಷ್ಣ ಈ ಹಾಡನ್ನು ಹಾಡಿ ಸಂಗೀತವನ್ನು ನೀಡಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed